Ad Widget

ಎಲಿಮಲೆ : ಚಿತ್ತಾರ ಕಲಾ ಆರ್ಟ್ಸ್ ತಂಡ ಉದ್ಘಾಟನೆ

ಚಿತ್ತಾರ ಕಲಾ ಆರ್ಟ್ಸ್ ಎಲಿಮಲೆ ಇದರ ಉದ್ಘಾಟನಾ ಕಾರ್ಯಕ್ರಮ ಆ.21ರಂದು ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಹಿರಿಯರಾದ ರಾಧಾಕೃಷ್ಣ ಶ್ರೀಕಟೀಲ್ ದೀಪ ಬೆಳಗಿಸಿ ಕಲಾ ತಂಡವನ್ನು ಉದ್ಘಾಟಿಸಿದರು.
ಶಾಲಾ ಮುಖ್ಯ್ಯೊಪಾಧ್ಯಾಯರಾದ ಶ್ರೀಧರ ಗೌಡ ಕೆರೆಮೂಲೆ ತಂಡದ ಲಾಂಛನವನ್ನು ಬಿಡುಗಡೆಗೊಳಿಸಿದರು.
ಉದ್ಯಮಿ ಹಾಗೂ ಕಲಾ ತಂಡದ ಪ್ರೋತ್ಸಾಹಕ ನವೀನ್ ಜಾಕೆ ಇವರು ತಂಡದ ಸಮವಸ್ತ್ರ ಬಿಡುಗಡೆಗೊಳಿಸಿದರು.
ಅಜ್ಜಾವರ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ  ಗೋಪಿನಾಥ್ ಮೆತ್ತಡ್ಕ ಮತ್ತು ತಂಡದ ಹಿರಿಯ ಸದಸ್ಯರಾದ  ರಾಜಗೋಪಾಲ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
ತಂಡದ ಪರಿಚಯ ಮತ್ತು ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಕಿರಣ್ ಗುಡ್ಡೆಮನೆ ವಿವರಿಸಿದರು.
ತುಳು ಮತ್ತು ಅರೆಭಾಷೆ ನಾಟಕ ಮತ್ತು ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವುದರ ಜೊತೆಗೆ ಮುಂದಿನ ದಿನಗಳಲ್ಲಿ ಯಕ್ಷಗಾನ, ನಾಟಕ, ಭರತನಾಟ್ಯ ಇನ್ನಿತರ ತರಬೇತಿಗಳನ್ನು ಪ್ರಾರಂಬಿಸುವ ಯೋಜನೆ ಇದ್ದು ಆಸಕ್ತರು ತಂಡದ ಸದಸ್ಯತ್ವವನ್ನು ಹೊಂದುವ ಅವಕಾಶ ಕಲ್ಪಿಸಲಾಗಿದೆ.
ಜಯಂತ್ ತಳೂರು ತಂಡದ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ವಂದಿಸಿದರು.
ಕಿರಣ್ ಗುಡ್ಡೆಮನೆ, ಜಯಂತ್ ತಳೂರು, ದಿನೇಶ್ ಕೇರ ತಂಡದ ನಿರ್ವಹಣೆ ಮತ್ತು ನೇತೃತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading