Ad Widget

ಕುಕ್ಕೆ ಕ್ಷೇತ್ರದಲ್ಲಿ ಅಧಿಕ ಭಕ್ತರ ಸಂದಣಿ

ಸುಬ್ರಹ್ಮಣ್ಯ ಆಗಸ್ಟ್ 17 : ಆಗಸ್ಟ್ ತಿಂಗಳಲ್ಲಿ ಬಂದ ಸರಣಿ ರಜೆಯಿಂದಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರವಿವಾರ ಅತ್ಯಧಿಕ ಭಕ್ತರು ಆಗಮಿಸಿ ಶ್ರೀ ದೇವರ ದರ್ಶನದೊಂದಿಗೆ ಪ್ರಸಾದ ಸ್ವೀಕರಿಸಿದರು.
ಜಿನುಗು ಮಳೆ ಸುರಿಯುತ್ತಿದ್ದರೂ ಕೂಡ ಮಳೆಯನ್ನು ಲೆಕ್ಕಿಸದೇ ಕ್ಷೇತ್ರದ ಭಕ್ತರು ಸರತಿ ಸಾಲಿನಲ್ಲಿ ರಥಬೀದಿಯಿಂದ ಹಾಗೂ ದೇವಳದ ಹೋರಾಂಗಣದಲ್ಲಿ ಸಾಗಿ ದೇವರ ದರ್ಶನ ಪಡೆದರು.
ಭೋಜನ ಶಾಲೆಯಲ್ಲಿ ಬೆಳಗ್ಗಿನ ಉಪಹಾರ ಮುಗಿಸಿದ ತಕ್ಷಣ ಮಧ್ಯಾಹ್ನದ ಭೋಜನ ವ್ಯವಸ್ಥೆ ಕೂಡ ನಿರಂತರವಾಗಿ ಸಾಗಿತ್ತು.
ದೇವಳದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಭಕ್ತರ ಸುಗಮ ದರ್ಶನ ಹಾಗೂ ಪ್ರಸಾದ ಸ್ವೀಕಾರಕ್ಕಾಗಿ ಸಕಲ ವ್ಯವಸ್ಥೆಗಳನ್ನ ಮಾಡಿದ್ದರು.
ವಾಹನಗಳ ಪಾರ್ಕಿಂಗ್ ಎಲ್ಲಾ ಸ್ಥಳಗಳು ವಾಹನಗಳಿಂದ ತುಂಬಿ ತುಳುಕುತ್ತಿತ್ತು. 
ಶನಿವಾರದಿಂದಲೇ ಕ್ಷೇತ್ರಕ್ಕೆ ಭಕ್ತರು ಆಗಮಿಸುತ್ತಿದ್ದರು.
ಶ್ರೀ ದೇವಳದ ಎಲ್ಲ ವಸತಿ ಗೃಹಗಳು ಪೂರ್ತಿಯಾಗಿದ್ದರಿಂದ ಖಾಸಗಿ ವಸತಿಗೃಹದವರು ಭಕ್ತರ ವಾಸ್ತವ್ಯಕ್ಕಾಗಿ ವ್ಯವಸ್ಥೆಗಳನ್ನು ಮಾಡಿದ್ದರು.
ಕುಕ್ಕೆ ಕ್ಷೇತ್ರಕ್ಕೆ ಭಕ್ತಾದಿಗಳು ಭಕ್ತಿಯಿಂದ ನೀಡಿದ ಪಂಚೆಗಳನ್ನು ಇಂದು ಬಹಿರಂಗ ಹರಾಜು ಮಾಡಲಾಗಿತ್ತು.
ಪಂಚೆ ಕೊಂಡುಕೊಳ್ಳಲು ಊರ ಪರವೂರ ಭಕ್ತರು ಆಗಮಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading