Ad Widget

ಗುತ್ತಿಗಾರು : ಗ್ರಾಮ ಪಂಚಾಯತ್ ನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

ಗುತ್ತಿಗಾರು ಗ್ರಾಮ ಪಂಚಾಯತ್ ನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಧ್ವಜಾರೋಹಣವನ್ನು ಗ್ರಾ.ಪಂ. ಅಧ್ಯಕ್ಷೆ ಸುಮಿತ್ರಾ ಮೂಕಮಲೆ ನೆರವೇರಿಸಿ ಶುಭಹಾರೈಸಿದರು.
ಗ್ರಾ.ಪಂ.ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ವೆಂಕಟ್ ವಳಲಂಬೆ ಮಾತನಾಡಿ “ನಮ್ಮ ಕರ್ತವ್ಯ ಮತ್ತು ಹಕ್ಕುಗಳು ಹಾಗೂ ಪ್ರಸ್ತುತ ದೇಶದ ಸ್ಥಿತಿಗತಿಗಳ ಬಗ್ಗೆ ಹಾಗೂ ಹೆಚ್ಚೆಚ್ಚು ದೇಶ ಪ್ರೇಮ ಬೆಳೆಸಿಕೊಳ್ಳಬೇಕು” ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಭಾರತೀ ಸಾಲ್ತಾಡಿ, ಗ್ರಾ.ಪಂ. ಸದಸ್ಯರು, ಪಿ.ಎ.ಸಿ.ಎಸ್ ಬ್ಯಾಂಕ್ ನ ನಿರ್ದೇಶಕರು, ಸೇವಾ ಪ್ರತಿನಿಧಿ ಲೋಕೇಶ್ವರ ಡಿ.ಆರ್, ಗ್ರಾ.ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪಂಚಾಯತ್ ಕಾರ್ಯದರ್ಶಿ ಮೋಹನ್.ಕೆ ಸ್ವಾಗತಿಸಿ, ಚೋಮಯ್ಯ ವಂದಿಸಿದರು.
ಸಿಬ್ಬಂದಿ ತೇಜಾವತಿ ಆಜಡ್ಕ
ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading