Ad Widget

ಕಕ್ಕೆಬೆಟ್ಟು : ರಬ್ಬರ್ ತೋಟದಲ್ಲಿ ಕಲರ್ ಕಲ್ಲು – ಅಕ್ರಮ ಸಾಗಾಟ ಪತ್ತೆ ಹಚ್ಚಿದ ಸ್ಥಳೀಯರು

ದೊಡ್ಡತೋಟ ಸಮೀಪದ ಕಕ್ಕೆಬೆಟ್ಟು ನಲ್ಲಿರುವ ಕೆ.ಎಫ್.ಡಿ.ಸಿ ರಬ್ಬರ್ ತೋಟದಲ್ಲಿ ಬೆಲೆಬಾಳುವ ಬಣ್ಣದ ಕಲ್ಲುಗಳ ಅಕ್ರಮ ಸಾಗಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಕಕ್ಕೆಬೆಟ್ಟು ರಬ್ಬರ್ ಗುಡ್ಡದಲ್ಲಿ ಕೆಂಪು-ನೀಲಿ ಮಿಶ್ರಿತ ಬಂಡೆಕಲ್ಲು ಇದೆ ಎಂದು ತಿಳಿದ ಮೈಸೂರು ಕಡೆಯ ತಂಡವೊಂದು ಪಿಕಪ್ ವಾಹನದಲ್ಲಿ ಬಂದು ಅಕ್ರಮವಾಗಿ ತುಂಡರಿಸಿ ಸಾಗಾಟ ಮಾಡುತ್ತಿದ್ದರು.
ಈ ಬಗ್ಗೆ ಸ್ಥಳೀಯರಿಗೆ ಅನುಮಾನಗೊಂಡು ಪರಿಶೀಲಿಸಿದಾಗ ವಿಷಯ ಬೆಳಕಿಗೆ ಬಂದಿದೆ. 
ಈ ಬಗ್ಗೆ ಮಾಹಿತಿ ತಿಳಿದು ನೆಲ್ಲೂರು ಕೆಮ್ರಾಜೆ ಮತ್ತು ಉಬರಡ್ಕ ಗ್ರಾಮ ಪಂಚಾಯತ್ ನ ಕಂದಾಯ ಅಧಿಕಾರಿಗಳು ಮತ್ತು ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಒಂದುವರೆ ತಿಂಗಳಿಂದ ನಿರಂತರ ಸಾಗಾಟ ಮಾಡುತ್ತಿದ್ದು ಕೆ.ಜಿ ಗೆ ಸುಮಾರು 400 ರೂಪಾಯಿ ಇದೆ ಎನ್ನಲಾಗುತ್ತಿದೆ. 
ರಬ್ಬರ್ ತೋಟದ ಒಳಗಿನಿಂದ ಕಲ್ಲು ಸಾಗಾಟವಾಗಿರುವುದರಿಂದ ಈ ಅಕ್ರಮ ಚಟುವಟಿಕೆಯ ಹಿಂದೆ ಕೆ.ಎಫ್.ಡಿ.ಸಿ. ಸಿಬ್ಬಂದಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading