Ad Widget

ರೈಟ್ ಟು ಲಿವ್ ಕೋಟೆ ಫೌಂಡೇಷನ್ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿ

ಕೋಟೆ ಫೌಂಡೇಷನ್ ವತಿಯಿಂದ ಸುಳ್ಯದ ಯುವಕ, ಯುವತಿಯರು, ಗೃಹಿಣಿಯರು ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ಪಡೆಯಲು ಸುವರ್ಣ ಅವಕಾಶ ಒದಗಿಸಿದೆ. ಸುಳ್ಯದ ಜೂನಿಯ‌ರ್ ಕಾಲೇಜ್ ರಸ್ತೆಯ ಜೇನು ಸೊಸೈಟಿ ಹಿಂಭಾಗದಲ್ಲಿರುವ ಸಾಂದೀಪ್ ಶಾಲೆಯಲ್ಲಿ ರೈಟ್ ಟು ಲಿವ್ (ಕೋಟೆ ಫೌಂಡೇಷನ್‌), ಎಂ. ಬಿ ಫೌಂಡೇಷನ್ ಸಹಯೋಗದೊಂದಿಗೆ ಉದ್ಯೋಗ ಆಧಾರಿತ ಉಚಿತ ಕಂಪ್ಯೂಟರ್ ಮತ್ತು ಜೀವನ ಕೌಶಲ್ಯಗಳ ತರಗತಿಗಳನ್ನು ಆರಂಭಿಸಿದೆ.

. . . . . . . . .

ಪ್ರಸ್ತುತ Microsoft Office, Office 365, Open Office, Canva (DTP), Kannada and English Typing, Tally Prime, GST, Online Banking, Cloud Office ಹಾಗೂ Life skills, Resume, and Interview Preparation ಬಗ್ಗೆ ತರಬೇತಿ ನೀಡಲಿದೆ.
ಮುಖ್ಯವಾಹಿನಿಯ ಶಿಕ್ಷಣದಲ್ಲಿ ದೊರಕದಿರುವ, ಹೊಸ ಉದ್ಯೋಗ ಅವಕಾಶಗಳಿಗೆ ಬೇಕಾಗಿರುವ, ಕೌಶಲ್ಯಗಳನ್ನು ಗ್ರಾಮೀಣ ವಲಯಕ್ಕೆ ಒದಗಿಸುವ ಆಶಯ ಇಟ್ಟುಕೊಂಡಿರುವ ರೈಟ್ ಟು ಲಿವ್ ಸಂಸ್ಥೆ ಉಚಿತವಾಗಿ ಕೌಶಲ್ಯಧಾರಿತ ಕಂಪ್ಯೂಟರ್ ತರಗತಿಗಳನ್ನು ಆರಂಭಿಸಿದೆ. ಇದರ ಪ್ರಯೋಜನವನ್ನು 18 ರಿಂದ 45ರ ವಯೋಮಿತಿಯ ಯುವಕ, ಯುವತಿಯರು, ಗೃಹಿಣಿಯರು ಹಾಗೂ ವಿದ್ಯಾರ್ಥಿಗಳು ಪಡೆಯಬಹುದು. ಹೆಚ್ಚಿನ ಮಾಹಿತಿ ಹಾಗೂ ದಾಖಲಾತಿಗಾಗಿ 9916087028, 9633433441 ಸಂಖ್ಯೆಗೆ ಕರೆ ಮಾಡಬಹುದು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading