Ad Widget

ಸುಬ್ರಹ್ಮಣ್ಯ : ನೂಚಿಲದಲ್ಲಿ ರಸ್ತೆ ಬದಿ ಕುಸಿತ

ಸ್ಥಳಕ್ಕೆ ಭೇಟಿ ನೀಡಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ

ಕುಕ್ಕೆ ಸುಬ್ರಹ್ಮಣ್ಯದ ನೂಚಿಲ ಎಂಬಲ್ಲಿ 10 ಮನೆಗಳಿಗೆ ಸಂಪರ್ಕ ಕಲ್ಪಿಸುವ ಪಂಚಾಯತ್ ರಸ್ತೆಯ ಎಡಭಾಗದಲ್ಲಿ ಸುಮಾರು 35 ಅಡಿಯಷ್ಟು ಆಳದ ಬರೆ ಇದ್ದು, ಮೊನ್ನೆ ಸುರಿದ ಭಾರೀ ಮಳೆಗೆ ಈ ಬರೆ ಕುಸಿತಗೊಂಡಿದ್ದು, ಮಳೆಗೆ ಇನ್ನಷ್ಟು ಕುಸಿತವಾಗುವ ಸಂಭವವಿದೆ. ಹಾಗೆಯೇ ಈ ರಸ್ತೆಯಲ್ಲಿ ಸಂಚಾರವೂ ಕೂಡ ಕಷ್ಟಕರವಾಗುವ ಪರಿಸ್ಥಿತಿಯಲ್ಲಿ ಇದ್ದು, ಸ್ಥಳಕ್ಕೆ ಇಂದು(ಜು.29) ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿದ್ದು, ಸಂಬಂಧಪಟ್ಟ ಇಲಾಖೆಗೆ ಗಮನಹರಿಸುವಂತೆ ಸೂಚಿಸಿರುವುದಾಗಿ ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಜೇಶ್.ಎನ್.ಎಸ್, ಸದಸ್ಯರಾದ ಗಿರೀಶ್ ಆಚಾರ್ಯ ಪೈಲಾಜೆ, ಶ್ರೀಕುಮಾರ್ ಬಿಲದ್ವಾರ, ಸ್ಥಳೀಯರಾದ ಬಾಲಸುಬ್ರಹ್ಮಣ್ಯ ಭಟ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading