Ad Widget

ಎರಡು ದಿನಗಳಿಂದ ಸುಳ್ಯ ತಾಲೂಕು ಕಗ್ಗತ್ತಲಲ್ಲಿ

ಈ ಪರಿಸ್ಥಿತಿಗೆ ಸುಳ್ಯದಲ್ಲಿ 35 ವರ್ಷಗಳಿಂದ ಶಾಸಕರಾಗಿ ಆಡಳಿತ ನಡೆಸುತ್ತಿರುವವರ ಇಚ್ಛಾಶಕ್ತಿ ಕೊರತೆ ಕಾರಣ

ಭವಾನಿಶಂಕರ್ ಕಲ್ಮಡ್ಕ ಆಕ್ರೋಶ

ಸುಳ್ಯದಲ್ಲಿ ನಿರಂತರ 3 ದಿನಗಳಿಂದ ಸುರಿಯುತ್ತಿರುವ ಭೀಕರ ಗಾಳಿ ಮಳೆಗೆ ಅಲ್ಲಲ್ಲಿ ಮರಗಳು ಬಿದ್ದು ವಿದ್ಯುತ್ ಕಂಬಗಳಿಗೆ, ವಿದ್ಯುತ್ ಲೈನ್ ಗಳು ದರಾಶಾಹಿ ಯಾಗಿರುವುದು ಒಂದು ಕಾರಣ. ಇದನ್ನು ತುರ್ತು ದುರಸ್ಥಿ ಪಡಿಸಿ ಪರಿಣಾಮಕಾರಿಯಾಗಿ ಮರು ಸ್ಥಾಪಿಸಲು ಅಧಿಕಾರಿಗಳು, ಇರುವ ಕೆಲವೇ ಕೆಲವು ಲೈನ್ ಮ್ಯಾನ್ ಗಳು ಮತ್ತು ಗುತ್ತಿಗೆ ಸಿಬ್ಬಂದಿಗಳೊಂದಿಗೆ ಪ್ರಯತ್ನ ಪಡುತ್ತಿದ್ದಾರೆ.
ಆದರೆ ಸುಳ್ಯದ ಈ ಪರಿಸ್ಥಿತಿಗೆ ಕಳೆದ 35 ವರ್ಷಗಳಿಂದ ಆಯ್ಕೆ ಗೊಂಡು ಕೇವಲ ಟೈಮ್ ಪಾಸ್ ಶಾಸಕರಾಗಿ, ಸುಳ್ಯದ ಮೂಲಭೂತ ಸೌಕರ್ಯಗಳ ಬಗ್ಗೆ ಕೇವಲ ಪತ್ರಿಕಾ ಹೇಳಿಕೆ ಕೊಟ್ಟು ಪ್ರಚಾರವನ್ನು ಮಾತ್ರ ಗಿಟ್ಟಿಸಿಕೊಂಡ ಬಿಜೆಪಿ ಮಾಜಿ ಮತ್ತು ಹಾಲಿ ಶಾಸಕರೇ ಕಾರಣ. ಏಕೆಂದರೆ ಈ ಬಿಜೆಪಿಯವರಿಗೆ ಕೇವಲ ಧರ್ಮಾಧಾರಿತ ಮತ್ತು  ಮತ್ತು ಭಾವನಾತ್ಮಕ ರೀತಿಯಲ್ಲಿ ಓಟ್ ಪಡೆಯುವ ಮೂಲಕ ಬಹುತೇಕ ಗ್ರಾಮ ಪಂಚಾಯತ್ ಜಿಲ್ಲಾ ಪಂಚಾಯತ್, ಅಲ್ಲದೆ ನಿರಂತರ 35 ವರ್ಷಗಳಿಂದ ಶಾಸಕರನ್ನು, ಲೋಕಸಭಾ ಸದಸ್ಯರನ್ನು ಗೆಲ್ಲಿಸಿಕೊಂಡು ಬಂದಿದ್ದು ಮಾತ್ರ.
ಸುಳ್ಯದ ಜನತೆಗೆ ಮೂಲಭೂತ ಸೌಕರ್ಯ ನೀಡಿರುವುದು ಶೂನ್ಯ. ಕೆಲಸ ಮಾಡುವ ಇಚ್ಛಾಶಕ್ತಿ ಇಲ್ಲ, ಆಸಕ್ತಿ ಇಲ್ಲ. 110 ಕೆ ವಿ ಕೇವಲ ಬೇಡಿಕೆಯಾಗಿ ಉಳಿದಿದೆ. ಸಧ್ಯ ಇರುವ 33 ಕೆವಿ ವಿದ್ಯುತ್ ರಸ್ತೆ ಬದಿ  ಬ್ರಹತ್ ಮರಗಳ ನಡುವೆ ಬರುತ್ತಿರುವುದನ್ನು  ಕೊನೆಯ ಪಕ್ಷ ಭೂಗತ ಕೇಬಲ್ ಅಳವಡಿಕೆಯನ್ನಾದರೂ ಕಳೆದ 35 ವರ್ಷಗಳಿಂದ ಮಾಡಿದ್ದರೆ ಸುಳ್ಯಕ್ಕೆ  ಈ ಪರಿಸ್ಥಿತಿ ಬರುತ್ತಿರಲಿಲ್ಲ. ಸುಳ್ಯದಲ್ಲಿ ಈ ಮಟ್ಟಕ್ಕೆ ವಿದ್ಯುತ್, ರಸ್ತೆ, ಚರಂಡಿ, ಸಮಸ್ಯೆಗೆ 35 ವರ್ಷಗಳಿಂದ ಸುಳ್ಯದಲ್ಲಿ ಅಧಿಕಾರ ಅನುಭವಿಸುತ್ತಿರುವ ಬಿಜೆಪಿ ಪಕ್ಷದ ಜನಪ್ರತಿನಿದಿಗಳೇ ಕಾರಣ. ಈ ಬಗ್ಗೆ ಜನತೆ ಪರಿಣಾಮಕಾರಿಯಾಗಿ ಯೋಚಿಸಬೇಕು ಎಂದು ಕಾಂಗ್ರೆಸ್ ಮುಖಂಡ, ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ್ ಕಲ್ಮಡ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading