Ad Widget

ಜಾಲ್ಸೂರು : ಶ್ರೀ ಗುರು ರಾಘವೇಂದ್ರ ಮಹಿಳಾ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸುಳ್ಯ ಇದರ
26 ನೇ ಶ್ರೀ ಗುರು ರಾಘವೇಂದ್ರ ಮಹಿಳಾ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ ಜಾಲ್ಸೂರಿನ ಶ್ರೀ ಗುರು ರಾಘವೇಂದ್ರ ಭಜನಾ ಮಂದಿರದಲ್ಲಿ ಇಂದು ನಡೆಯಿತು.
ಇದರ ಉದ್ಘಾಟನೆಯನ್ನು ಶ್ರೀ ಗುರು ರಾಘವೇಂದ್ರ ಭಜನಾ ಮಂದಿರ ಅಧ್ಯಕ್ಷರಾದ ಜಯರಾಮ್ ರೈ ರವರು  ಹಣ್ಣಿನ ಗಿಡವನ್ನು ನಾಟಿ ಮಾಡಿ  ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ “ಮಹಿಳೆಯರ ಜೀವನವನ್ನು ಹಸನು ಗೊಳಿಸುತ್ತಿರುವುದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಕಳೆದ 20 ವರ್ಷಗಳಿಂದ ನಮ್ಮ ತಾಲೂಕಿನಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಸಾಮಾಜಿಕ ನ್ಯಾಯವನ್ನು ಒದಗಿಸುವ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆಸುತ್ತಾ ಬಂದಿದೆ”  ಎಂದು ತಿಳಿಸಿದರು
ಕ್ಷೇತ್ರ ಯೋಜನಾಧಿಕಾರಿ ಶ್ರೀ ಮಾಧವ ಗೌಡ ರವರು “ಮಹಿಳೆಯರಲ್ಲಿ ಕುಟುಂಬ ನಿರ್ವಹಣಾ ಜಾಣ್ಮೆ, ಹಣಕಾಸು ವ್ಯವಹಾರ ಜ್ಞಾನ, ಮಕ್ಕಳ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ವೈಯಕ್ತಿಕ ಶುಚಿತ್ವ, ಪರಿಸರ ಪ್ರಜ್ಞೆ, ಸ್ವಉದ್ಯೋಗ, ನಾಗರಿಕ ಸೌಲಭ್ಯಗಳ ಬಗ್ಗೆ ಬಳಕೆ ಮುಂತಾದ ಗುರಿಗಳನ್ನಿರಿಸಿಕೊಂಡು ಯೋಜನೆಯು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮವನ್ನು  ಪ್ರಾರಂಭಿಸಲಾಗಿದೆ” ಎಂದು ತಿಳಿಸಿದರು.
ಶ್ರೀಮತಿ ಲಕ್ಷ್ಮಿ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಪ್ರಾಸ್ತವಿಕ ಮಾತನಾಡಿದರು
ಗ್ರಾ.ಪಂ ಅಧ್ಯಕ್ಷೆ ಸಾವಿತ್ರಿ ಗೋಪಾಲ್ ಅಡ್ಕಾರ್  ರವರು  ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರ ಪಾಲಿಗೆ ವರದಾನವಾಗಿದೆ” ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಶ್ರೀ ಗುರು ರಾಘವೇಂದ್ರ ಭಜನಾ ಮಂದಿರದ ಉಪಾಧ್ಯಕ್ಷರು ಮಾಧವ ಕಾಳಮನೆ, ಜಾಲ್ಸೂರು ಒಕ್ಕೂಟ ಅಧ್ಯಕ್ಷರಾದ ಗಣೇಶ್ ಅಂಬಾಡಿ ಮೂಲೆ ಹಾಗೂ ಅಂಜನಾದ್ರಿ ಒಕ್ಕೂಟ ಅಧ್ಯಕ್ಷರಾದ ಕೃಷ್ಣಪ್ಪ ನಾಯಕ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಶ್ರೀ ಗುರು ರಾಘವೇಂದ್ರ ಜ್ಞಾನವಿಕಾಸ ಸದಸ್ಯರು ಹಾಗೂ  ಜಾಲ್ಸೂರು & ಅಂಜನಾದ್ರಿ ಒಕ್ಕೂಟದ ಸದಸ್ಯರು  ಭಾಗವಹಿಸಿದ್ದರು.
ಮೇಲ್ವಿಚಾರಕಿ ಜಯಶ್ರೀ ಸ್ವಾಗತಿಸಿ, ಸೇವಾ ಪ್ರತಿನಿಧಿ ಚಂದ್ರಕಲಾ ರವರು ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading