Ad Widget

ನಾಳೆಯಿಂದ(ಜು.23) ಕುಲ್ಕುಂದ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಲಕ್ಷ್ಮೀನಾರಾಯಣ ಹೃದಯ ಹೋಮ

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಾಳೆಯಿಂದ 10 ದಿನಗಳ ಕಾಲ ನಿರಂತರವಾಗಿ ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ ಹಾಗೂ ಅನ್ನದಾನ ಸೇವೆ ನಡೆಯಲಿರುವುದು.
ಲಕ್ಷ್ಮೀನಾರಾಯಣ ಹೃದಯ ಎಂಬ ಪೌರಾಣಿಕ ಮಂತ್ರಗಳು ಅಥರ್ವಣ ರಹಸ್ಯದಲ್ಲಿ ಹೇಳಲ್ಪಟ್ಟಿದೆ.
“ಶ್ರೇಷ್ಠವಾದ ಹಾಗೂ ಅತ್ಯಂತ ಶಕ್ತಿಯುತವಾದ ಜಪ ಹಾಗೂ ಹೋಮಗಳನ್ನು ನಾಳೆ ಬುಧವಾರದಿಂದ ಪ್ರಾರಂಭಗೊಂಡು ಆಗಸ್ಟ್ 1 ಶುಕ್ರವಾರದ ತನಕ ಹತ್ತು ದಿನಗಳ ಕಾಲ ಕುಲ್ಕುಂದ ಬಸವೇಶ್ವರ ದೇವಸ್ಥಾನದಲ್ಲಿ ಭಕ್ತರೆಲ್ಲರ ಕ್ಷೇಮಕ್ಕಾಗಿ ನಡೆಯಲಿರುವುದು. ಗರ್ಭಿಣಿಯರು ಪಾರಾಯಣ ಶ್ರವಣ ಮಾಡಿದರೆ, ಅಭಿಮಂತ್ರಿಕ ತೀರ್ಥ ಪ್ರಾಸನ ಮಾಡಿದರೆ ಅವರ ಕುಲದಲ್ಲಿ ಶ್ರೀಪತಿಯೇ ಸ್ವಯಂ ಬರುತ್ತಾನೆಂದು, ಅಂದರೆ ಒಳ್ಳೆಯ ಗುಣವಂತ, ಬುದ್ದಿವಂತ, ಗಂಡು ಮಗು ಪ್ರಾಪ್ತಿಯಾಗುವುದು ಹಾಗೂ ಅವರ ಮನೆಯಲ್ಲಿ ಮಂದ ಭಾಗ್ಯ ಅಂದರೆ ಮಂದಮತಿಗಳು, ಬುದ್ದಿ ಹೀನರು ಹುಟ್ಟುವುದಿಲ್ಲ. ಈ ರೀತಿಯಾಗಿ ಶ್ರೇಷ್ಠ ಫಲಗಳುಳ್ಳಂತಹ   ಲಕ್ಷ್ಮೀನಾರಾಯಣ ಹೃದಯ ಹೋಮ ಎಂಬ ಯಜ್ಞಾನುಷ್ಟಾನದಲ್ಲಿ ಸರ್ವ ಭಕ್ತರು ಭಾಗವಹಿಸಿ ಶ್ರೀ ದೇವರ ಅನುಗ್ರಹ ಪ್ರಸಾದವನ್ನು ಪಡೆಯಬೇಕೆಂದು” ದೇವಳದ ಆಡಳಿತ ಮಂಡಳಿಯವರು ತಿಳಿಸಿರುತ್ತಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading