Ad Widget

ಕಿರುಕಥೆ – ಕನಸು ನನಸು

ನಯನ ಸುಮಧುರ ಜೀವನದಲ್ಲಿರುವ ಹುಡುಗಿ.ಮಾತಾಪಿತರಿಗೆ ಒಬ್ಬಳೇ ಮಗಳು.ಬಹಳ ಮುದ್ದಿಸಿ ಬೆಳೆಸಿದ್ದರು ತಂದೆ ತಾಯಿ.ಆಕರ್ಷಕ ತಾರೆಯಾಗಿ ಬೆಳಗುತ್ತಿದ್ದಳು ನಯನ.ಕಡು ಬಡತನವಿಲ್ಲದೆ ಜೀವಿಸಲು ಬೇಕಾದ ಶೈಲಿಯನ್ನು ಹೊಂದಿತ್ತು ಅವಳ ಕುಟುಂಬ.ಪಿ.ಯು ಸಿ ಓದುತ್ತಿದ್ದ ನಯನಾಳಿಗೆ ತಂದೆ ತಾಯಿಯರಲ್ಲಿ ಅಪಾರ ಪ್ರೀತಿ ಗೌರವ.ಒಂದು ಕೂಡಾ ಅಪ್ಪಿ ತಪ್ಪಿ ಮಾತನಾಡದೆ ಮಾತಾಪಿತರ ಬಗ್ಗೆ ಪೂರ್ಣ ಸಂಯಮ ತೋರುತ್ತಿದ್ದಳು ನಯನ.ಖುಷಿ ತುಂಬಿ ಇವರ ಕುಟುಂಬದ ಜೀವನ ಆಹ್ಲಾದಮಯವಾಗಿತ್ತು.ಅವಳ ತಂದೆ ಒಂದು ಸಾಮಾನ್ಯ ರೀತಿಯ ಅಂಗಡಿಯನ್ನಿಟ್ಟು ವ್ಯಾಪಾರವನ್ನು ನೋಡಿಕೊಳ್ಳುತ್ತಿದ್ದರು.ಸ್ವಲ್ಪ ಕಂಗಿನ ಗಿಡಗಳು ತೆಂಗಿನ ಮರಗಳು ಕಾಳು ಮೆಣಸಿನ ಆದಾಯವು ಇತ್ತು.ಚೆನ್ನಾಗಿ ವ್ಯಾಪಾರ ಸಾಗುತ್ತಿತ್ತು.ಹಾಗೆ ದಿನಗಳು ಉರುಳುತ್ತಿದ್ದವು.ಅನಿರೀಕ್ಷಿತ ಕಾಲದಲ್ಲಿ ನಯನಳ ತಂದೆ ತಾಯಿಯ ಮಧ್ಯೆ ಗಲಾಟೆ ಆಯಿತು.ಎಂದೂ ಹಾಗೊಂದು ರೀತಿ ಸಂಭವಿಸಿರಲಿಲ್ಲ.ತಂದೆ ತಾಯಿಯ ನಡುವೆ ಮನಸ್ತಾಪ ತುಂಬಿ ಅಚ್ಚರಿಯಾಯಿತು.ನಯನ ಕಾಲೇಜಿಗೆ ಹೋಗಿದ್ದಳು.ಜೋರಾಗಿ ಅಬ್ಬರಿಸಿದ ರಿವಾಜುಗಳಿಂದ  ತೀವ್ರವಾಗಿ ನೊಂದ ನಯನಳ ತಾಯಿ ಎರಡೇ ದಿನಗಳಲ್ಲಿ ಯಾರಿಗೂ ಹೇಳದೆ ಮನೆ ಬಿಟ್ಟು ಹೋದರು.ಅಂದು ಕೂಡ ನಯನ ಕಾಲೇಜಿಗೆ ಓದಲು ತೆರಳಿದ್ದಳು.ಅವಳ ತಂದೆ ಅಂಗಡಿಗೆ ಹೋಗಿ ವ್ಯಾಪಾರದಲ್ಲಿ ದೇವರನ್ನು ಕಾಣುತ್ತಿದ್ದರು.ಅಂಗಡಿ ಮನೆಯ ಸನಿಹವೇ ಇತ್ತು.ಗಲಾಟೆ ರೀತಿಗಳ ಬಗ್ಗೆ ಅವರ ಮನಸ್ಸಲ್ಲೂ ತುಂಬ ನೋವಿತ್ತು.ನಲ್ಮೆಯ ಪತ್ನಿ ನಾಪತ್ತೆಯಾಗಿದ್ದು ತುಂಬಾ ಹೊತ್ತು ತಿಳಿದಿರಲಿಲ್ಲ.ಮಧ್ಯಾಹ್ನ ಊಟಕ್ಕೆ ಬಂದಾಗ ಮಡದಿ ಇರಲಿಲ್ಲ.ಅವರು ಎಷ್ಟು ಕರೆದರೂ ಮರು ಶಬ್ದ ಕೇಳದಾದಾಗ ಪಕ್ಕದ ಮನೆಯವರಲ್ಲೂ ವಿಚಾರಿಸಿದರು.ನಾಲ್ಕೈದು ಮನೆಗಳವರೂ’ನಮಗೆ ಗೊತ್ತಿಲ್ಲ’ಅಂದು ಬಿಟ್ಟರು.ಊಟ ತಯಾರು ಮಾಡಿ ತೆರಳಿದ್ದರು ರಾಧಿಕಾ ಅವರು.ಬರುವಳು ಎಂದು ಪ್ರತಾಪ್ ಊಟ ಮಾಡಿ ಅಂಗಡಿ ಕಡೆಗೆ ತೆರಳಿದರು.ಸಂಜೆಯಾದರೂ ರಾಧಿಕಾರ ಸುಳಿವಿಲ್ಲ.ಕಾಲೇಜು ಬಿಟ್ಟು ಬಂದ ನಯನ ತಾಯಿ ಮನೆಯಲ್ಲಿ ಇಲ್ಲದ ವಿಷಯ ತಿಳಿದು ಸ್ವಲ್ಪ ಗಾಬರಿಗೊಂಡಳು.ತಾಯಿ ಎಲ್ಲಾದರು ಹೋಗಿರಬಹುದು.ಬರುವಳು ಎಂದು ಭರವಸೆಯಿಂದ ಇದ್ದಳು.ಆದರೆ ರಾತ್ರಿಯಾದರೂ ಅವಳಮ್ಮನ ಪತ್ತೆಯೇ ಇಲ್ಲ.ತಾಯಿಗೆ ಬೈಯ್ಯಬಾರದಿತ್ತು ಪಪ್ಪಾ ಎಂದು ಬಿಟ್ಟಳು‌ .ಅಂದು ರಾತ್ರಿಯೊಳಗೆ ಕುಟುಂಬಿಕರ ಮನೆಗಳಿಗೂ ದೂರವಾಣಿ ಮೂಲಕ ವಿಚಾರಿಸಿದ್ದರು ಪ್ರತಾಪ್.ಆದರೆ ರಾಧಿಕಾ ಅವರು ಎಲ್ಲಿಗೂ ತಲುಪಿರಲ್ಲಿಲ್ಲ.ಅಂದು ರಾತ್ರಿ ತಂದೆ ಮಗಳು ತುಂಬಾ ಬೇಸರದಿಂದ ಕಳೆದು ಹೋದರು.ಮರುದಿನ ಪ್ರತಾಪ್ ಅವರು ಪೋಲಿಸ್ ಠಾಣೆಗೆ ಪತ್ನಿ ನಾಪತ್ತೆಯಾದ ಕುರಿತು ದೂರನ್ನು ಕೊಟ್ಟರು.ದೂರು ದಾಖಲಿಸಿದ ಪೊಲೀಸರು ಪತ್ತೆ ಹಚ್ಚುವ ಕಾರ್ಯಕ್ಕೆ ಇಳಿದರು.ಅವರು ಅದೆಷ್ಟು ಹುಡುಕಿದರೂ ರಾಧಿಕಾರ ಪತ್ತೆಯೇ ಇಲ್ಲ.ಪೋಲೀಸರು ರಾಧಿಕಾರ ಭಾವಚಿತ್ರ ಸಹಿತ ಪತ್ರಿಕಾ ಪ್ರಕಟನೆಗಳನ್ನೂ ನೀಡಿದ್ದರು.ಹೀಗೆ ಐದು ತಿಂಗಳುಗಳು  ಕಳೆದು ಹೋದವು. ನಯನ ಮತ್ತು ತಂದೆ ಪ್ರತಾಪ್ ನಿರೀಕ್ಷೆಯಿಂದ ದಿನ ಕಳೆಯುತ್ತಿದ್ದರು.ಪೋಲೀಸರು ಹಾಗೆ ಪತ್ತೆ ಕಾರ್ಯದಲ್ಲಿ ಇದ್ದರು.ವರುಷಗಳು ಎರಡು ಕಳೆದು ಹೋದವು.ನಯನಾಳ ಕಣ್ಣೀರು ಬತ್ತಿ ಹೋಗಿತ್ತು .ಅಮ್ಮನ ನೆನಪಿನಲ್ಲಿ ತುಂಬಾ ಸೊರಗಿದ್ದಳು.ದ್ವಿತೀಯ ಪಿ.ಯು ಸಿ ಮುಗಿಸಿ ಅವಳಪ್ಪನ ಅಂಗಡಿಯಲ್ಲಿ ಸಹಾಯ ನೀಡುತ್ತಿದ್ದಳು.ಹೀಗೆ ತಾಯಿ ಇಲ್ಲದೆ ಆರು ವರುಷಗಳು ಕಳೆದವು.ಎಲ್ಲಿಯೂ ಪತ್ತೆಯಾಗಲಿಲ್ಲ.ನಯನಳಿಗೀಗ ಇಪ್ಪತ್ತೆರಡು ವರುಷ ಕಳೆದಿತ್ತು.ಅದೊಂದು ದಿನ ನಯನಳಿಗೆ ಮದುವೆ ಗಂಡು ಹುಡುಕುವ ನಿರ್ಧಾರಕ್ಕೆ ಬಂದರು ಪ್ರತಾಪ್. ಸೂಕ್ತ ಗಂಡು ಹುಡುಕಿ ಸಿಕ್ಕಿದನು.ನಿಶ್ಚಿತಾರ್ಥ ಮುಗಿದು ಹೋಯಿತು.ಮದುವೆಗೆ ಮೂರು ತಿಂಗಳು ಬಾಕಿ.ದಿನಗಳು ಬೇಗನೇ ಉರುಳಿದವು.ತಯಾರಿಗಳು ಚಾಲ್ತಿಯಲ್ಲಿ ಸಾಗಿದ್ದವು.ನಯನಳಿಗೆ ತಾಯಿಯ ನೆನಪಾಗಿ ದುಃಖದ  ನದಿಯಲ್ಲಿ ಈಜಾಡುತ್ತಿದ್ದಳು.ವಿವಾಹ ದಿನಕ್ಕೆ ಎಂಟು ದಿನಗಳು ಬಾಕಿ.ಅಂದು ರಾತ್ರಿ ನಿದ್ದೆಗೆ ಜಾರಿದ್ದಳು ನಯನ.ನಿದ್ದೆಯಲ್ಲಿ ಕನಸೊಂದು ಕಂಡಿತು.ತಾಯಿಯು ಮನೆಗೆ ಬಂದ ಬಗ್ಗೆ. ಕನಸಿನಲ್ಲಿ ಖುಷಿಯಿಂದ ನಲಿದಾಡಿದಳು.ಮುಂಜಾನೆ ಎದ್ದು ತಂದೆಗೂ ತಾನು ಕಂಡ ಕನಸಿನ ಬಗ್ಗೆ ತಿಳಿಸಿದಳು ನಯನ.ಅವರು ಆಶಾವಾದದಲ್ಲೇ ಇದ್ದರು.ಆರು ಗಂಟೆಗೆ  ಬಾಗಿಲು ತೆರೆದಾಗ ನಯನಳಿಗೆ ಯಾರೋ ಸ್ವಲ್ಪ ದೂರದಿಂದ ನಡೆದು ಬರುವುದು ಕಾಣಿಸಿತು.ಮನೆಯತ್ತ ಹೆಜ್ಜೆ ಹಾಕುತ್ತಿದ್ದ ಆ ಸ್ತ್ರೀ ಸನಿಹ ತಲುಪಿದಾಗ ನಯನಳ ತಾಯಿಯಾಗಿದ್ದಳು.ಮಗಳನ್ನು ಬಿಗಿದಪ್ಪಿದ ರಾಧಿಕಾ ಕಣ್ಣೀರಧಾರೆ ಹರಿಸಿದರು.ಪ್ರತಾಪ್ ಆನಂದದಿಂದ ಪತ್ನಿಯ ಮುಖ ನೋಡಿ ಸ್ಥಬ್ದತೆಯಿಂದ ಕಾಣದಾದರು.ರಾಧಿಕಾರಲ್ಲಿ ಇಷ್ಟು ವರುಷ ಎಲ್ಲಿದ್ದಿ ಎಂದು ಗಂಡ ಪ್ರತಾಪ್ ಅವರು  ಕೇಳಿದಾಗ ಚೆನ್ನೈಯಲ್ಲಿದ್ದೆ ಎಂದರು.ಏನು ಮಾಡುತ್ತಿದ್ದೆ ಎಂದು ತುಂಬಾ ಕೇಳಿದಾಗ ಭಿಕ್ಷೆ ಬೇಡುತ್ತಿದ್ದೆ ಎಂದರು‌.ರಾಧಿಕಾ ಹೆಚ್ಚಾಗಿ ಸ್ಥಿಮಿತ ಕಳೆದುಕೊಂಡಿರಲಿಲ್ಲ.ಚಂದದ ಸೀರೆ ತೊಟ್ಟಿದ್ದರು.ಮುಖ ಕಾಂತಿಯುತವಾಗಿತ್ತು.ಪ್ರತಾಪ್ ರಾಧಿಕಾ ಮತ್ತು ನಯನ ಮಾತುಗಳ ಮಧ್ಯೆ ಸೆಣಸಾಡುತ್ತಿದ್ದರು.ಪ್ರತಾಪ್ ಅವರು ಪೋಲೀಸ್ ಠಾಣೆಗೆ ಪತ್ನಿ ಮನೆ ಸೇರಿದ ವಿಷಯ ತಿಳಿಸಿದರು.ಪೋಲೀಸರು ಒಕೆ ಎಂದರು. ನಯನ ತುಂಬಾ ಸಂತಸ ಸಡಗರ ಸಂಭ್ರಮದಿಂದ ಇದ್ದಳು. ಕಾರಣ ಮದುವೆ ಹಾಗೂ ತಾಯಿಯ ಆಗಮನ.ಮದುವೆ ದಿನ ಬಂದೇ ಬಿಟ್ಟಿತು.ರಾಧಿಕಾ ಖುಷಿಯಲ್ಲಿ ಮದುವೆ ಕಲರವವ ಕಂಡರು.ನೆಂಟರಿಷ್ಟರು ಊರವರು ವಿವಾಹ ಸುದಿನಕ್ಕೆ ಸೇರಿದ್ದರು.ಎಲ್ಲರೂ ನೂತನ ವಧು ವರರಿಗೆ ಶುಭ ಹಾರೈಸಿದರು.ಪ್ರತಾಪ್ ಮಗಳನ್ನು ಎವೆಯಿಕ್ಕದೆ ನೋಡುತ್ತಿದ್ದರು.ಅತಿಥಿಗಳನ್ನು ಸ್ವಾಗತಿಸುತ್ತಾ ಸಮತೋಲನದಲ್ಲಿದ್ದರು.ತಾಯಿ  ದೂರವಾಗಿದ್ದ ದಿನಗಳಲ್ಲಿ ತುಂಬಾ ಯಾತನೆಪಟ್ಟಿದ್ದ ನಯನಾಳಿಗೆ ಮದುವೆಗೆ ಕೆಲವೇ ದಿನಗಳಿರುವಾಗ ನಿದ್ದೆಯಲ್ಲಿ ಕಂಡ ಕನಸು ನನಸಾದ ಬಗ್ಗೆ ಆಶ್ಚರ್ಯ ಸಂತಸ ಸಂಭ್ರಮ ಹೇಳ ತೀರದಾಗಿತ್ತು.ದಿನಗಳು ಅರಳಿ ನಲಿಯುತ್ತಿದ್ದವು.

✍️ ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading