Ad Widget

ದೇವಚಳ್ಳ : ಕರಂಗಲ್ಲು ಎಂಬಲ್ಲಿ ಸೇತುವೆ ಕುಸಿತ

ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಿ.ಡಿ.ಓ

ದೇವಚಳ್ಳ ಗ್ರಾಮದ ಕರಂಗಲ್ಲು ಎಂಬಲ್ಲಿ ಸೇತುವೆಯೊಂದು ಕುಸಿತಗೊಂಡಿದ್ದು, ಹರಿಹರ ಪಳ್ಳತ್ತಡ್ಕ-ಮುಳ್ಳುಬಾಗಿಲು-ಕರಂಗಲ್ಲು ಮೂಲಕವಾಗಿ ಕಂದ್ರಪ್ಪಾಡಿ ಸಂಪರ್ಕಿಸುವ ರಸ್ತೆಯಲ್ಲಿರುವ ಸೇತುವೆ ಇದಾಗಿದೆ. ಕರಂಗಲ್ಲು, ದೊಡ್ಡಕಜೆ, ಹೆರ್ಕಜೆ ಸೇರಿದಂತೆ ಆ ಭಾಗದಿಂದ ಜನರು ಹರಿಹರಕ್ಕೆ ಬರಬೇಕಿದ್ದರೆ ಈ ಸೇತುವೆಯ ಮೂಲಕವೇ ಬರಬೇಕಾಗಿದ್ದು, ಸ್ಥಳಕ್ಕೆ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್ ರವರು ಭೇಟಿ ನೀಡಿದ್ದು, ತಾತ್ಕಾಲಿಕ ಕ್ರಮದ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಊರಿನವರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading