Ad Widget

ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಕಿರಣ.ಬಿ ಅವರಿಗೆ ಡಾಕ್ಟರೇಟ್ ಪದವಿ

ಕೆ.ವಿ.ಜಿ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಕಿರಣ.ಬಿ ಇವರ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ತನ್ನ 25ನೇ ಘಟಿಕೋತ್ಸವದ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇವರು ಪಿ.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್ ಶಿವಮೊಗ್ಗ ಇಲ್ಲಿ ಗಣಿತಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾಗಿರುವ ಡಾ. ಷಣ್ಮುಖ ಎಂ.ಸಿ ಇವರ ಮಾರ್ಗದರ್ಶನದಲ್ಲಿ “Advanced graph theoretical analysis of topological indices and their mathematical relations 2” ಕುರಿತು ಮಹಾಪ್ರಬಂಧವನ್ನು ಮಂಡಿಸಿದ್ದರು. ಇವರ ಹಲವಾರು ಪ್ರಬಂಧಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಣೆಗೊಂಡಿದೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆಯ ಬಾಳೆಗುಂಡಿಯ ದಿ.ನರಸಿಂಹ ಭಟ್ ಮತ್ತು ದಿ.ಶ್ಯಾಮಲ ದಂಪತಿಗಳ ಪುತ್ರ.
ಇವರು ಸುಮಾರು 14 ವರ್ಷಗಳಿಂದ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಗಣಿತಶಾಸ್ತ್ರ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರನ್ನು ಡಾ.ರೇಣುಕಾಪ್ರಸಾದ್ ಕೆ.ವಿ ಚೇರ್‌ಮೆನ್ ಕಮಿಟಿ ‘ಬಿ’ ಎಒ.ಎಲ್.ಇ(ರಿ) ಸುಳ್ಯ, ಡಾ. ಜ್ಯೋತಿ ಆರ್. ಪ್ರಸಾದ್ ಕಾರ್ಯದರ್ಶಿ, ಕಮಿಟಿ ‘ಬಿ’ ಎ.ಒ.ಎಲ್.ಇ.(ರಿ), ಸುಳ್ಯ, ಮೌರ್ಯ ಆರ್. ಕುರುಂಜಿ, ಎಕ್ಸೆಕ್ಯುಟಿವ್ ಡೈರೆಕ್ಟರ್, ಕೆ.ವಿ.ಜಿ.ಡಿ.ಸಿ.&ಹೆಚ್, ಸುಳ್ಯ, ಡಾ. ಉಜ್ವಲ್ ಯು.ಜೆ., ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು, ಪ್ರಾಂಶುಪಾಲ ಡಾ. ಸುರೇಶ್.ವಿ ಮತ್ತು ಉಪಪ್ರಾಂಶುಪಾಲ ಡಾ.ಶ್ರೀಧರ್.ಕೆ ಮತ್ತು ಸಿಬ್ಬಂದಿವರ್ಗದವರು ಅಭಿನಂದಿಸಿರುತ್ತಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading