Ad Widget

ಸುಳ್ಯ : ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ತರಬೇತಿ ಕಾರ್ಯಾಗಾರ – ಸನ್ಮಾನ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಸುಳ್ಯ ತಾಲೂಕು, ಜನಜಾಗೃತಿ ಪ್ರಾದೇಶಿಕ ವಿಭಾಗ ಹಾಗೂ ತಾಲೂಕಿನ “ಶೌರ್ಯ” ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರವು ಸುಳ್ಯದ ಲಯನ್ಸ್‌ ಸೇವಾ ಸದನದಲ್ಲಿ ಜು.3 ರಂದು ನಡೆಯಿತು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಲೋಕನಾಥ್ ಅಮೆಚೂರ್ ರವರು ವಹಿಸಿದ್ದರು.
ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ರವರು ದೀಪ ಪ್ರಜ್ವಲಿಸಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಯೋಜನೆಯ ಜಿಲ್ಲಾ ಪ್ರಾದೇಶಿಕ ನಿರ್ದೇಶಕ ಬಾಬು ನಾಯ್ಕ್ ಎಸ್, ಸ್ವಸಹಾಯ ಸಂಘದ ಕೇಂದ್ರ ಒಕ್ಕೂಟದ ಅಧ್ಯಕ್ಷ ಸುರೇಶ್‌ ಕಣೆಮರಡ್ಕ, ಯೋಜನಾಧಿಕಾರಿ ಮಾಧವ ಗೌಡ, ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಪಿ.ಜಿ.ಜಯರಾಮ, ಕ್ಯಾಪ್ಟನ್ ಸತೀಶ್ ಬಂಬುಳಿ, ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಗಣೇಶ್ ಆಚಾರ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್ ಟೀಮ್ ಕಮಾಂಡರ್ ಶಾಂತಿಲಾಲ್ ಜಟಿಯ ಮತ್ತು ಜೈವಂತ್ ಪಠಗಾರ್ ರವರನ್ನು ಸನ್ಮಾನಿಸಲಾಯಿತು.
ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರ 5 ವರ್ಷದ ಕಾರ್ಯ ಸಾಧನೆಯ ಸಂಪೂರ್ಣ ಚಿತ್ರಣದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.
“ಶೌರ್ಯ” ದ ಸ್ವಯಂ ಸೇವಕರಿಗೆ ಮಾಹಿತಿ, ಮಾರ್ಗದರ್ಶನ ಹಾಗೂ ಘಟಕದ ವ್ಯವಸ್ಥೆಯ ಬಗ್ಗೆ ವಿವೇಕ್ ವಿನ್ಸೆಂಟ್ ಪಾಯಸ್ ರವರು ಸಲಹೆ ನೀಡಿದರು.
ಎನ್.ಡಿ.ಆರ್.ಎಫ್ ಟೀಂ ಕಮಾಂಡರ್ ಶಾಂತಿ ಲಾಲ್ ಜಟಿಯಾ ರವರು ಹಿಂದಿ ಭಾಷೆಯಲ್ಲಿ ಶೌರ್ಯದ ಸದಸ್ಯರಿಗೆ ತರಬೇತಿ ಕಾರ್ಯಗಾರ ನಡೆಸಿದರು. ವಿನೋದ್ ಆರ್ಯ ರವರು ಕನ್ನಡಕ್ಕೆ  ಅನುವಾದಿಸಿದರು.. ಕ್ಷೇತ್ರ ಯೋಜನಾಧಿಕಾರಿ ಮಾಧವ ಗೌಡ ಸ್ವಾಗತಿಸಿ, ಮೇಲ್ವಿಚಾರಕರಾದ ಶ್ರೀಮತಿ ಸವಿತಾ ನಿರೂಪಿಸಿ, ದಿನೇಶ್ ವಂದಿಸಿದರು

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading