Ad Widget

ಅಜ್ಜಾವರ : ಮಂಜುನಾಥೇಶ್ವರ ವಲಯ ಭಜನಾ ಪರಿಷತ್ ನೂತನ ವಲಯ ಸಮಿತಿ ರಚನೆ

ಅಧ್ಯಕ್ಷರಾಗಿ ಪ್ರಕಾಶ್ ಕಣೆಮರಡ್ಕ
ವಲಯ ಕಾರ್ಯದರ್ಶಿಯಾಗಿ ಶ್ರೀಮತಿ ವಿಶಾಲ ಸೀತಾರಾಮ ಕರ್ಲಪ್ಪಾಡಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಹಾಗೂ ಶ್ರೀ ಮಂಜುನಾಥೇಶ್ವರ ವಲಯ ಭಜನಾ ಪರಿಷತ್ ನ ಸಭೆಯನ್ನು ವಲಯ ಭಜನಾ ಪರಿಷತ್ ಅಧ್ಯಕ್ಷರಾದ  ಚಂದ್ರಶೇಖರ ರವರ ಅಧ್ಯಕ್ಷತೆಯಲ್ಲಿ ಅಜ್ಜಾವರ ಮಹಿಷಮರ್ಧಿನಿ ವೇದಪಾಠ ಶಾಲಾ ಆವರಣದಲ್ಲಿ ನಡೆಸಲಾಯಿತು.
ಈ ಸಭೆಗೆ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷರಾದ ಸೋಮಶೇಖರ ಪೈಕ ದೀಪ ಪ್ರಜ್ವಲಿಸುವ ಮುಖೇನ ಚಾಲನೆಯನ್ನು ನೀಡಿದರು.
ಶ್ರೀ.ಕ್ಷೇ.ಧ.ಗ್ರಾ ಯೋಜನೆಯ ಯೋಜನಾಧಿಕಾರಿಗಳಾದ ಮಾಧವ ಗೌಡರವರು ಮಾತನಾಡಿ “ಭಜನಾ ಪರಿಷತ್ ನ ಉದ್ದೇಶ, ಸ್ಥಳೀಯ ಭಜನಾ ಮಂಡಳಿಗಳ ಬಲಪಡಿಸುವಿಕೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮತ್ತು ಸಮಾಜಮುಖಿ ಸೇವೆಗಳಲ್ಲಿ ಭಜನಾ ಮಂಡಳಿಗಳ ಹಾಗೂ ಭಜನಾ ಪರಿಷತ್ ನ ಪಾತ್ರದ ಬಗ್ಗೆ” ಮಾಹಿತಿ ಮಾರ್ಗದರ್ಶನವನ್ನು ನೀಡಿದರು.
ಈ ಸಂದರ್ಭದಲ್ಲಿ ತಾಲೂಕಿನ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನ ಕಾರ್ಯದರ್ಶಿ ಗಳಾದ  ಸತೀಶ್.ಟಿ.ಎನ್, ಮಹಿಳಾ ಭಜನಾ ಪರಿಷತ್ ಕಾರ್ಯದರ್ಶಿಗಳಾದ ವಿಶಾಲ ಸೀತಾರಾಮ, ವಲಯ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ, ತಾಲೂಕು ಭಜನಾ ಪರಿಷತ್ ಉಪಾಧ್ಯಕ್ಷರಾದ ಶ್ರೀಮತಿ ಸಂಧ್ಯಾ ಮಂಡೆಕೋಲು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ವಲಯ ಪದಾಧಿಕಾರಿಗಳ ಸಮಿತಿ ರಚನೆಯನ್ನು ಮಾಡಲಾಯಿತು.
ಭಜನಾ ಪರಿಷತ್ ನ ನೂತನ ವಲಯಾಧ್ಯಕ್ಷರಾಗಿ ಪ್ರಕಾಶ್ ಕಣೆಮರಡ್ಕ, ವಲಯ ಉಪಾಧ್ಯಕ್ಷರಾಗಿ ಸೀತಾರಾಮ ಶಾಂತಿಮಾಜಲು, ವಲಯ ಕಾರ್ಯದರ್ಶಿಗಳಾಗಿ ಶ್ರೀಮತಿ ವಿಶಾಲ ಸೀತಾರಾಮ ಕರ್ಲಪ್ಪಾಡಿ, ಜತೆ ಕಾರ್ಯದರ್ಶಿಗಳಾಗಿ ವಸಂತ ಮಡಿವಾಳಮೂಲೆ, ಕೋಶಾಧಿಕಾರಿಯಾಗಿ ಶ್ರೀಮತಿ ರಮ್ಯಾ ದೊಡ್ಡೇರಿ(ರೇವತಿ)
ಹಾಗೂ ವಲಯ ಭಜನಾ ಪರಿಷತ್ ಸದಸ್ಯರಾಗಿ ಚಂದ್ರಜಿತ್, ಕೃಷ್ಣ ಮಣಿಯಾಣಿ ಕನ್ಯಾನ, ಸುಂದರ ಅಜ್ಜಾವರ ಇವರುಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಲಯ ಭಜನಾ ಮಂಡಳಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ವಲಯ ಭಜನಾ ಪರಿಷತ್ ನ ಪದಾಧಿಕಾರಿಗಳು, ಸೇವಾಪ್ರತಿನಿಧಿಯವರು ಭಾಗವಹಿಸಿದ್ದರು.
ವಲಯ ಮೇಲ್ವಿಚಾರಕರಾದ ಶ್ರೀಮತಿ ಕಾಂತಿಕಮಣಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ಶ್ರೀಮತಿ ರಜನಿ ಆಡ್ಪಂಗಾಯ ಸ್ವಾಗತಿಸಿ, ಮಂಡೆಕೋಲು ಸೇವಾಪ್ರತಿನಿಧಿ ಶ್ರೀಮತಿ ವೇದಾವತಿ ಧನ್ಯವಾದ ಅರ್ಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading