Ad Widget

ಗುತ್ತಿಗಾರು : ಜೂ.29 ರಿಂದ “ಅಮರ ನೃತ್ಯ ತರಬೇತಿ ಕೇಂದ್ರ” ಪ್ರಾರಂಭ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಗುತ್ತಿಗಾರು ಇದರ ವತಿಯಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ಚುರುಕುತನದ ಯಶಸ್ವಿ, ಮೊಬೈಲ್ ಬಳಕೆಯಿಂದ ದೂರವಿರಿಸುವಿಕೆಯ ಪ್ರಯತ್ನದ ಪರಿಕಲ್ಪನೆಯೊಂದಿಗೆ ಜೂ.29 ರಿಂದ ಗುತ್ತಿಗಾರಿನಲ್ಲಿ “ಅಮರ ನೃತ್ಯ ತರಬೇತಿ ಕೇಂದ್ರ” ವನ್ನು ಪ್ರಾರಭಿಸಲಾಗುತ್ತಿದ್ದು, ನೃತ್ಯ ತರಬೇತಿಯನ್ನು ನಾಟ್ಯ ಪ್ರವೀಣೆ ಪ್ರಣಮ್ಯ ಸುಬ್ರಹ್ಮಣ್ಯ ಇವರು ನೀಡುತ್ತಿದ್ದು, ಈ ತರಬೇತಿ ಶಿಬಿರವು ಪ್ರತೀ ಆದಿತ್ಯವಾರ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಗುತ್ತಿಗಾರು ಗ್ರಾಮ ಪಂಚಾಯತ್ ನ ಪ.ವರ್ಗದ ಸಭಾಭವನದಲ್ಲಿ ನಡೆಯಲಿದ್ದು, ತರಬೇತಿ ಕೇಂದ್ರದಲ್ಲಿ ವಿವಿಧ ನೃತ್ಯ ಶೈಲಿಗಳಾದ ಸೆಮಿ ಕ್ಲಾಸಿಕಲ್, ಫ್ರೀಸ್ಟೈಲ್, ಕಾಂಟೆಂಪರರಿ, ಬಾಲಿವುಡ್, ಜಾನಪದ, ಬಿ-ಬೋಯಿಂಗ್, ಫಿಲ್ಮಿ, ಲಿರಿಕಲ್, ಕ್ಲಾಸಿಕಲ್ ಸೇರಿದಂತೆ ವಿವಿಧ ನೃತ್ಯಗಳ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ ಎಂದು ಸಂಘಟಕರು ತಿಳಿಸಿದ್ದು, ಆಸಕ್ತ ವಿದ್ಯಾರ್ಥಿಗಳ ಪೋಷಕರು 6361935860 , 9686987113 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading