Ad Widget

ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಸುಳ್ಯ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಜೂ.24ರಂದು ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸಿ.ಇ.ಒ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಉಜ್ವಲ್.ಯು.ಜೆ, ಉಪಪ್ರಾಂಶುಪಾಲರಾದ ಡಾ.ಶ್ರೀಧರ್.ಕೆ, ಯೋಗಗುರು ಮತ್ತು ಎಂ.ಬಿ.ಎ ವಿಭಾಗ ಮುಖ್ಯಸ್ಥರಾದ ಪ್ರೊ.ಕೃಷ್ಣಾನಂದ.ಎ ಹಾಗೂ ಎನ್.ಎಸ್.ಎಸ್ ಘಟಕಾಧಿಕಾರಿಗಳಾದ ಪ್ರೊ.ಸತ್ಯಜಿತ್.ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಸಿ.ಇ.ಒ ಡಾ.ಉಜ್ವಲ್ ಯು.ಜೆ ಅವರು ಮಾತನಾಡಿ “ಮಾನಸಿಕ ಹಾಗೂ ಶಾರೀರಿಕ ಆರೋಗ್ಯದ ಮೇಲೆ ಯೋಗದ ಪ್ರಯೋಜನ ಮತ್ತು ದೈನಂದಿನ ಜೀವನದಲ್ಲಿ ಯೋಗದ ಪ್ರಾಮುಖ್ಯತೆಯನ್ನು” ವಿವರಿಸಿದರು.
ಉಪಪ್ರಾಂಶುಪಾಲರಾದ ಡಾ.ಶ್ರೀಧರ್.ಕೆ ರವರು ಮಾತನಾಡುತ್ತಾ “ಯೋಗದ ವೈಜ್ಞಾನಿಕ ಹಾಗೂ ಜೀವನಮುಖಿ ಅಂಶಗಳ ಬಗ್ಗೆ” ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ವಕ್ತಾರರಾದ ಯೋಗಗುರು ಪ್ರೊ.ಕೃಷ್ಣಾನಂದ.ಎ ಅವರು ಹಲವು ಯೋಗಾಸನಗಳು, ಚಕ್ರಧ್ಯಾನ ಮತ್ತು ಪ್ರಾಣಾಯಾಮಗಳ ಪ್ರಾತ್ಯಕ್ಷಿತೆ ನೀಡಿ, ತಾತ್ವಿಕ ವಿವರಗಳೊಂದಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಘಟಕಾಧಿಕಾರಿಗಳಾದ ಪ್ರೊ.ಸತ್ಯಜಿತ್.ಎಂ ಅವರು ಎಲ್ಲಾ ಅತಿಥಿಗಳು, ಭಾಗವಹಿಸಿದ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಎನ್.ಎಸ್.ಎಸ್ ಸಂಯೋಜಕರಾದ ಪ್ರೊ.ನಸೀಮಾ ಸಿ.ಎ ಅವರು ನಿರ್ವಹಿಸಿದರು.
ಸಿವಿಲ್ ಇಂಜಿನಿಯರಿಂಗ್ ವಿಭಾಗದ ಎನ್.ಎಸ್.ಎಸ್ ಸಂಯೋಜಕರಾದ ಪ್ರೊ.ಲಕ್ಷ್ಮೀನಾರಾಯಣ.ಎನ್ ಹಾಗೂ ಕಾಲೇಜಿನ ಆಡಳಿತಾಧಿಕಾರಿಗಳಾದ ನಾಗೇಶ್ ಕೊಚ್ಚಿ ಅವರು ಕಾರ್ಯಕ್ರಮವು ಸುಗಮವಾಗಿ ನಡೆಯಲು ಸಹಕರಿಸಿದರು.
ಯೋಗ ಕಾರ್ಯಕ್ರಮದಲ್ಲಿ ವಿಭಾಗದ ಡೀನ್‌ಗಳು, ವಿಭಾಗ ಮುಖ್ಯಸ್ಥರುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗದವರು ಭಾಗವಹಿಸಿ ಯೋಗ ಅಭ್ಯಾಸ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮಕ್ಕೆ ಎ.ಒ.ಎಲ್.ಇ(ರಿ.) ಕಮಿಟಿ ‘ಬಿ’ ಚೇರ್‌ಮೆನ್ ಗಳಾದ ಡಾ.ರೇಣುಕಾಪ್ರಸಾದ್ ಕೆ.ವಿ, ಎ.ಒ.ಎಲ್.ಇ.(ರಿ.) ಕಮಿಟಿ ‘ಬಿ’ ಕಾರ್ಯದರ್ಶಿಗಳಾದ ಡಾ.ಜ್ಯೋತಿ.ಆರ್ ಪ್ರಸಾದ್, ಎ.ಒ.ಎಲ್.ಇ.(ರಿ.) ಕಮಿಟಿ ‘ಬಿ’ ನಿರ್ದೇಶಕರಾದ ಡಾ.ಅಭಿಜ್ಞಾ.ಕೆ ಮತ್ತು ಕೆ.ವಿ.ಜಿ.ಡಿ.ಸಿ & ಎಚ್ ಸುಳ್ಯ ಇದರ ಎಕ್ಸಿಕ್ಯುಟಿವ್ ಡೈರೆಕ್ಟರ್ ಮೌರ್ಯ.ಆರ್ ಪ್ರಸಾದ್ ಅವರು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿ ಯೋಗದ ಪ್ರಯೋಜನಗಳನ್ನು ಪಡೆದು ಆರೋಗ್ಯಪೂರ್ಣ ಜೀವನದತ್ತ ಹೆಜ್ಜೆ ಇಟ್ಟರು.
ಈ ಯೋಗ ದಿನಾಚರಣೆಯು ಭಾಗವಹಿಸಿದ ಎಲ್ಲರಿಗೂ ಯೋಗದ ಪ್ರಾಮುಖ್ಯತೆಯ ಅರಿವು ಮೂಡಿಸಲು ಸಹಾಯವಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading