Ad Widget

ಸುಬ್ರಹ್ಮಣ್ಯ : ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಧನಸಹಾಯ ಹಸ್ತಾಂತರ

ಸುಬ್ರಹ್ಮಣ್ಯ ಜೂನ್ 24 : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೈಕ್ಷಣಿಕ ವರ್ಷದಲ್ಲಿ ಅತ್ಯಧಿಕ ಅಂಕ ಪಡೆದ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರ ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವನ್ನು ಸುಬ್ರಹ್ಮಣ್ಯದ ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾಯಿತು.
ಪ್ರಾಥಮಿಕ ಕೃಷಿ ಪತ್ತಿನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಡಾlಎ.ಎ ತಿಲಕ್ ಹಾಗೂ ಗಾಯತ್ರಿ ತಿಲಕ್ ದಂಪತಿಗಳು ಸೊಸೈಟಿ ಸದಸ್ಯರುಗಳ 13 ಜನ ವಿದ್ಯಾರ್ಥಿಗಳಿಗೆ ರೂ 2,000 ದಂತೆ ಒಟ್ಟು 26 ಸಾವಿರ ರೂಪಾಯಿ ಸಹಾಯಧನವನ್ನು ಕೊಡುಗೆಯಾಗಿ ನೀಡಿದರು.
ಫಲಾನುಭವಿ ವಿದ್ಯಾರ್ಥಿಗಳಾದ ಅಕ್ಷರಿ.ಆರ್.ಎಸ್, ಹನಿ.ಬಿ.ಆರ್, ಅವನಿ.ಆರ್.ಎಸ್, ವೇದಿಕ ಕೆ.ಜಿ, ಭವಿಷ್ ಕುಮಾರ್, ಜನಿಶ್ ಡಿ.ಎಂ, ನಿಧಿ.ಎಸ್, ಕೆ.ಮಂಜುನಾಥ್ ಕುಮಾರ್, ಗಗನ್.ಎಂ.ಎಸ್, ಅಭಿ, ಅಭಿಗ್ನ.ಕೆ, ಸ್ವಾತಿ.ಎಸ್.ಕೆ, ಆತ್ಮಿಕ್.ಎ.ಎಸ್ ಸಹಾಯಧನ ಪಡೆದರು.
ಸೊಸೈಟಿ ಅಧ್ಯಕ್ಷರಾದ ವೆಂಕಟೇಶ್.ಹೆಚ್.ಎಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸೊಸೈಟಿ ಉಪಾಧ್ಯಕ್ಷರಾದ ದುಗ್ಗಪ್ಪ ಅಗ್ರಹಾರ, ಡಿ.ಸಿ.ಸಿ ಬ್ಯಾಂಕ್ ಸೂಪರ್ವೈಸರ್ ಮನೋಜ್, ಮುಖ್ಯ ಅತಿಥಿಗಳಾದ ವಿಶ್ವನಾಥ ನಡುತೋಟ, ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಕೆ.ಎಸ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸೊಸೈಟಿ ಮಾಜಿ ಅಧ್ಯಕ್ಷರುಗಳಾದ ಜಯಪ್ರಕಾಶ್ ಕೂಜುಗೋಡು, ರವೀಂದ್ರ ಕುಮಾರ್ ರುದ್ರಪಾದ, ನಿರ್ದೇಶಕರುಗಳಾದ ಮಾಧವ ದೇವರಗದ್ದೆ, ಯಶೋಧ ಕೃಷ್ಣ, ಗಿರೀಶ್ ಆಚಾರ್ಯ, ಭಾರತಿ ದಿನೇಶ್, ಕಿರಣ್ ಪೈಲಾಜೆ, ರಮ್ಯಾ ಪೈಲಾಜೆ, ಸೋಮಶೇಖರ್ ಕೂಜುಗೋಡು ಕಟ್ಟೆಮನೆ, ವಿದ್ಯಾರ್ಥಿಗಳ ಹೆತ್ತವರು, ಪೋಷಕರು, ಸೊಸೈಟಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading