Ad Widget

ಸುಬ್ರಹ್ಮಣ್ಯ ರೋಟರಿ ಕ್ಲಬ್ ಗೆ ಡೈಮಂಡ್ ಪ್ಲಸ್ ಅವಾರ್ಡ್

ಸುಬ್ರಹ್ಮಣ್ಯ ಜೂನ್ 22 : ಸುಬ್ರಹ್ಮಣ್ಯ ರೋಟರಿ ಕ್ಲಬ್ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳಾದ ಸಾರ್ವಜನಿಕ  ಸಮುದಾಯ ಅಭಿವೃದ್ಧಿ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮಗಳು ಅಂತರಾಷ್ಟ್ರೀಯ ರೋಟರಿ ಸಂಸ್ಥೆಗೆ ನೀಡಿದ ದೇಣಿಗೆ ಮುಂತಾದ ಜನೋಪಯೋಗಿ ಕಾರ್ಯಕ್ರಮಗಳಿಗೆ ಈ ಬಾರಿ ರೋಟರಿ ಜಿಲ್ಲೆ 31 81ರ ಸಣ್ಣ ಕ್ಲಬ್ ಗಳಲ್ಲಿ ಡೈಮಂಡ್ ಪ್ಲಸ್ ಅವಾರ್ಡ್ ಪ್ರಶಸ್ತಿ ಲಭಿಸಿರುತ್ತದೆ.
ಶನಿವಾರ ಮಂಗಳೂರು ಪಿಲಿಕುಳ ಸ್ಕೌಟ್ ಹಾಗೂ ಗೈಡ್ಸ್ ಸಭಾಭವನದಲ್ಲಿ ನಡೆದ ಜಿಲ್ಲಾ ಅವಾರ್ಡ್ ನೈಟ್ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಗವರ್ನರ್ ವಿಕ್ರಮ ದತ್ತ ಅವರು ಪ್ರಶಸ್ತಿ ವಿತರಿಸಿದರು. ಸುಬ್ರಹ್ಮಣ್ಯ  ರೋಟರಿ ಕ್ಲಬ್ ಗೆ ಡೈಮಂಡ್ ಪ್ಲಸ್ ಅವಾರ್ಡ್ ನೊಂದಿಗೆ ಸಿಗ್ನಿಫಿಕೆಂಟ್ ಅವಾರ್ಡ್ ಹಾಗೂ ಎಂಗೇಜ್ಮೆಂಟ್ ಅವಾರ್ಡ್ ಕೂಡ ಲಭಿಸಿರುತ್ತದೆ.
ಈ ಸಂದರ್ಭದಲ್ಲಿ ಜಿಲ್ಲಾ ಅವಾರ್ಡ್ ಕಮಿಟಿ ಪೂರ್ವ ಗವರ್ನರ್   ದೇವದಾಸ್ ರೈ, ನಿಯೋಜಿತ ಜಿಲ್ಲಾ ಗವರ್ನರ್ ರಾಮಕೃಷ್ಣ, ಜಿಲ್ಲಾ ಕಾರ್ಯದರ್ಶಿಗಳಾದ ರಿತೇಶ್  ಬಾಳಿಗ, ಆಸ್ಕರ್ ಆನಂದ್, ವಲಯ  5ರ ಅಸಿಸ್ಟೆಂಟ್ ಗವರ್ನರ್ ವಿನಯ ಕುಮಾರ್ ಬೆಳ್ಳಾರೆ  ಮುಂತಾದವರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ನಾಯರ್ ಹಾಗೂ ಕಾರ್ಯದರ್ಶಿ ಚಿದಾನಂದ ಕುಳ  ಪ್ರಶಸ್ತಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರೋಟರಿ ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ, ನಿಯೋಜಿತ ಅಧ್ಯಕ್ಷ ಜಯಪ್ರಕಾಶ್, ಕಾರ್ಯದರ್ಶಿ ಭವಾನಿಶಂಕರ ಪೈಲಾಜೆ, ಪೂರ್ವ ಅಸಿಸ್ಟೆಂಟ್ ಗವರ್ನರ್ ಗಳಾದ  ಶಿವರಾಮ ಎನೇಕಲ್, ರಾಮಕೃಷ್ಣ ಮಲ್ಲಾರ, ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರುಗಳಾದ ಗಿರಿಧರ ಸ್ಕಂದ, ಲೋಕೇಶ್ ಬಿ.ಎನ್, ವೆಂಕಟೇಶ್ ಎಚ್.ಎಲ್, ಗೋಪಾಲ್ ಎಣ್ಣೆಮಜಲು, ಸೀತಾರಾಮ್ ಎಣ್ಣೆಮಜಲು, ಮಾಯಿಲಪ್ಪ ಸಂಕೇಶ, ಭರತ್ ನೆಕ್ರಾಜೆ, ವಿಜಯಕುಮಾರ ಅಮೈ, ಪ್ರಶಾಂತ್ ಕೋಡಿಬೈಲು, ಡಾl ರವಿ ಕಕ್ಕೆಪದವು, ಸದಸ್ಯರುಗಳಾದ ರೋಹಿತ್ ಬಿ.ಬಿ, ವಿಶ್ರುತ್ ಕುಮಾರ್, ನಾಗರಾಜ ಪರಮಲೆ, ಪುನೀತ್ ಕರ್ನಾಜೆ, ಶಿವಪ್ರಸಾದ್ ಮಾದನಮನೆ, ನವೀನ್ ವಾಲ್ತಾಜೆ ಮುಂತಾದವರು ಹಾಜರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading