
ಅಡ್ಡನಪಾರೆಯಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀ ಶಂಖಪಾಲ ಸ್ಪೋಟ್ಸ್ ಕ್ಲಬ್ ಇದರ ನೂತನ ಕಟ್ಟಡ ಊರ ಹಾಗೂ ಪರವೂರ ದಾನಿಗಳ ಸಹಕಾರದಿಂದ ಸುಮಾರು 1.5 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಜೂ.15 ರಂದು ಲೋಕಾರ್ಪಣೆಗೊಂಡಿತು. ಬೆಳಗ್ಗೆ ಮಹಾಬಲೇಶ್ವರ ಭಟ್ ಗಣಪತಿ ನಡೆಸಿಕೊಟ್ಟರು. ಊರಿನ ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ನೂರಕ್ಕೂ ಮಿಕ್ಕಿ ಜನ ಭಾಗವಹಿಸಿದ್ದರು.
