Ad Widget

ಅರಮನೆಗಯ ಸೇತುವೆಗೆ ನಿರ್ಮಾಣಕ್ಕೆ 1ಕೋಟಿ 75 ಲಕ್ಷ ರೂಪಾಯಿ ಅನುದಾನ ಬಂದಿರುವುದು ಸಂತಸ ತಂದಿದೆ : ನವೀನ ಕಲ್ಲುಗುಡ್ಡೆ

. . . . . . . . .

ಆರಂತೋಡು ಗ್ರಾಮದ ಅರಮನೆಗಯ ಎಂಬಲ್ಲಿ ಬಲ್ನಾಡು ಹೊಳೆಗೆ ಅಡ್ಡಲಾಗಿ ನಿರ್ಮಿಸಿದಂತ ಅಡಿಕೆ ಪಾಲದ ಸೇತುವೆಗೆ ಶಾಶ್ವತವಾಗಿ ಮುಕ್ತಿ ಸಿಗುವಂತ ಕಾಲ ಕೂಡಿ ಬಂದಿದೆ, ಈ ಸೇತುವೆಯೂ ಹಲವಾರು ವರ್ಷಗಳ ಹಿಂದೆ ರೋಪ್ ಹಾಕಿ ಅಡಿಕೆ ಮರದ ಸಲಕೆಯನ್ನು ಹಾಕಿ ನಿರ್ಮಿಸಿದಂತ ಸೇತುವೆ ಇದರಲ್ಲಿ ಜನಗಳ ಸಂಚಾರ ಅಷ್ಟಕಷ್ಟೆ ಶಾಲಾ ವಿದ್ಯಾರ್ಥಿಗಳು ವೃದ್ಧರು ನಡೆದಾಡಲು ಮನೆಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ಹೊತ್ತೊಯ್ಯಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು, ಈ ನಡುವೆಯೂ ಈ ಭಾಗಕ್ಕೆ ಶಾಶ್ವತ ಸೇತುವೆ ನಿರ್ಮಿಸಿಕೊಡಬೇಕೆಂದು ಸಂಬಂಧಪಟ್ಟ ಎಲ್ಲಾ ಇಲಾಖೆಗೂ ಪತ್ರ ಬರೆದರೂ ಇಲಾಖೆಯಿಂದ ಹಿಂಬರಹ ಮಾತ್ರ ವಲ್ಲದೆ ಯಾವುದೇ ಪರಿಹಾರ ಸಿಕ್ಕಿಲ್ಲ. ಆದರೆ ಕಳೆದ ವರ್ಷ ಮಾನ್ಯ ಶಾಸಕರಾದ ಕು. ಭಾಗೀರಥಿ ಮುರುಳ್ಯರವರು ಸ್ಥಳಕ್ಕೆ ಭೇಟಿ ನೀಡಿ ನನ್ನ ಅವಧಿಯಲ್ಲಿ ಬಂದ ಅನುದಾನವನ್ನು ಆದ್ಯತೆ ಮೇರೆಗೆ ಅರಮನೆಗಯ ಸೇತುವೆಗೆ ನೀಡುವುದಾಗಿ ಭರವಸೆಯನ್ನು ಈ ಭಾಗದ ಜನರಿಗೆ ನೀಡಿದ್ದರು. ಅದರಂತೆ ಅರಮನೆಗಯ ಸೇತುವೆಗೆ 1ಕೋಟಿ 75 ಲಕ್ಷ ರೂಪಾಯಿ ಅನುದಾನವನ್ನು ನೀಡಿ ಶಾಶ್ವತ ಸೇತುವೆ ನಿರ್ಮಿಸಲು ಶ್ರಮವಹಿಸಿದ್ದಾರೆ.
ಸೇತುವೆಯ ಅನುದಾನಕ್ಕೆ ಶ್ರಮಿಸಿದ ಸಂಬಂಧಪಟ್ಟ ಎಲ್ಲಾ ಇಲಾಖೆಗೂ ಹಾಗೂ ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಿಗೂ, ಮಾಜಿ ಜಿ.ಪಂ. ಸದಸ್ಯರಿಗೂ,ಮಾಜಿ ಶಾಸಕರಿಗೂ, ಜಿಲ್ಲಾ ಉಸ್ತುವಾರಿ ಸಚಿವರುಗಳಿಗೂ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ಅಧ್ಯಕ್ಷ ನವೀನ ಕಲ್ಲುಗುಡ್ಡೆ ತಿಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading