Ad Widget

ಹರಿಹರ ಪಲ್ಲತ್ತಡ್ಕ : ಶ್ರೀ ಮಂಜುನಾಥೇಶ್ವರ ವಲಯ ಭಜನಾ ಪರಿಷತ್ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಹಾಗೂ ಶ್ರೀ ಮಂಜುನಾಥೇಶ್ವರ ವಲಯ ಭಜನಾ ಪರಿಷತ್ ನ ಸಭೆಯನ್ನು ವಲಯ ಭಜನಾ ಪರಿಷತ್ ಅಧ್ಯಕ್ಷರಾದ ಶ್ರೀಮತಿ ಶ್ರೀದೇವಿರವರ ಅಧ್ಯಕ್ಷತೆಯಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಸಲಾಯಿತು.
ಈ ಸಭೆಯನ್ನು ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷರಾದ ಸೋಮಶೇಖರ ಪೈಕಾರವರು ದೀಪ ಪ್ರಜ್ವಲಿಸುವ ಮುಖೇನ ಚಾಲನೆಯನ್ನು ನೀಡಿದರು.
ಈ ಸಭೆಯಲ್ಲಿ ಸುಳ್ಯ ತಾಲೂಕಿನ ಶ್ರೀ ಕ್ಷೇ. ಧ. ಗ್ರಾ. ಯೋಜನೆಯ ಯೋಜನಾಧಿಕಾರಿಯವರಾದ ಮಾಧವ ಗೌಡರವರು ಮಾತನಾಡುತ್ತ, ಭಜನಾ ಪರಿಷತ್ ನ ಉದ್ದೇಶ, ಸ್ಥಳೀಯ ಭಜನಾ ಮಂಡಳಿಗಳ ಬಲಪಡಿಸುವಿಕೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮತ್ತು ಸಮಾಜಮುಖಿ ಸೇವೆಗಳಲ್ಲಿ ಭಜನಾ ಮಂಡಳಿಗಳ ಹಾಗೂ ಭಜನಾ ಪರಿಷತ್ ನ ಪಾತ್ರದ ಬಗ್ಗೆ ಮಾಹಿತಿ ಮಾರ್ಗದರ್ಶನವನ್ನು ನೀಡಿದರು.
ಈ ಸಂದರ್ಭದಲ್ಲಿ ತಾಲೂಕಿನ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನ ಕಾರ್ಯದರ್ಶಿರವರಾದ ಸತೀಶ್ ಟಿ ಎನ್, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸುಭ್ರಹ್ಮಣ್ಯ ವಲಯದ ಅಧ್ಯಕ್ಷರಾದ ತೀರ್ಥರಾಮ ದೋನಿಪಳ್ಳರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ವಲಯ ಪದಾಧಿಕಾರಿಗಳ ಸಮಿತಿ ರಚನೆಯನ್ನು ಮಾಡಲಾಯಿತು.
ಭಜನಾ ಪರಿಷತ್ ನ ವಲಯ ಅಧ್ಯಕ್ಷರಾಗಿ ಚಂದ್ರಶೇಖರ ಕೊಂದಾಲರವರನ್ನು, ವಲಯ ಉಪಾಧ್ಯಕ್ಷರಾಗಿ ಗಂಗಾಧರ ಭಟ್ ಕಲ್ಮಕಾರುರವರನ್ನು, ವಲಯ ಕಾರ್ಯದರ್ಶಿಯವರಾಗಿ ಶ್ರೀಮತಿ ಚಂದ್ರಾವತಿ ಬಿ ರವರನ್ನು, ಜತೆ ಕಾರ್ಯದರ್ಶಿಯವರಾಗಿ ಶ್ರೀಮತಿ ಸಂದೇಶ್ ಕೆ ಜಿ ರವರನ್ನು, ಕೋಶಾಧಿಕಾರಿಯಾಗಿ ಶ್ರೀಮತಿ ಗಾಯತ್ರಿ ಭಟ್ ರವರನ್ನು ಹಾಗೂ ವಲಯ ಭಜನಾ ಪರಿಷತ್ ನ ಸದಸ್ಯರಾಗಿ ಶ್ರೀಮತಿ ವಾಣಿರವರನ್ನು ಮತ್ತು ಶ್ರೀಮತಿ ಯಶೋಧ ಕೆ ವಿ ರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಲಯ ಭಜನಾ ಮಂಡಳಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ವಲಯ ಭಜನಾ ಪರಿಷತ್ ನ ಪದಾಧಿಕಾರಿಗಳು, ಸೇವಾಪ್ರತಿನಿಧಿಯವರು ಭಾಗವಹಿಸಿದರು.
ಈ ಸಭೆಯಲ್ಲಿ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕೆ ರವರು ಸ್ವಾಗತಿಸಿ, ಕಾರ್ಯನಿರೂಪಿಸಿದರು. ಹರಿಹರ ಪಲ್ಲತ್ತಡ್ಕ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯವರಾದ ಶ್ರೀಮತಿ ನಾಗವೇಣಿರವರು ಧನ್ಯವಾದವಿತ್ತರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading