

2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗುತ್ತಿಗಾರು ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ವಾಣಿಜ್ಯ ವಿಭಾಗದ ವಿದ್ಯಾರ್ಥಿ ಯಶಸ್ವಿ ಎರ್ದಡ್ಕ ಇವರು ಫಲಿತಾಂಶ ಉತ್ತಮಪಡಿಸುವ ಸಲುವಾಗಿ ಮರು ಪರೀಕ್ಷೆ ಬರೆದಿದ್ದು 21 ಅಂಕ ಹೆಚ್ಚುವರಿ ಪಡೆದುಕೊಂಡಿರುತ್ತಾರೆ. ಮರು ಪರೀಕ್ಷೆಯಲ್ಲಿ 522 ಡಿಸ್ಟಿಂಕ್ಷನ್ ಅಂಕ ಪಡೆದದಿರುತ್ತಾರೆ. ಇವರು ಮಾಧವ ಎರ್ದಡ್ಕ ಹಾಗೂ ರೂಪ ಎರ್ದಡ್ಕ ರವರ ಪುತ್ರಿ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೇ ಮತ್ತೆ ಶುಲ್ಕ ಪಾವತಿಸಿ ಪರೀಕ್ಷೆ ಬರೆಯಲು ಅವಕಾಶವಿದೆ. ಈಕೆಯ ಸಾಧನೆಯಿಂದ ಶಾಲೆಯಲ್ಲಿ ವಿಶಿಷ್ಟ ಶ್ರೇಣಿಯ ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ.
