
ಬೆಳ್ಳಾರೆ ಗುತ್ತಿಗಾರು 33ಕೆ.ವಿ. ವಿದ್ಯುತ್ ಲೈನ್ ನ ಕಂಬವೊಂದು ಬಾಳಿಲ ಸಮೀಪ ಅಪಾಯಕಾರಿ ಸ್ಥಿತಿಯಲ್ಲಿದ್ದು ರಸ್ತೆಗೆ ಬೀಳುವ ಹಂತದಲ್ಲಿದೆ. ವಿದ್ಯುತ್ ಕಂಬದ ಬಳಿಯೇ ಪೈಪ್ ಲೈನ್ ಕಾಮಗಾರಿ ನಡೆಸಿದ್ದರಿಂದ ಕಂಬ ಬೀಳುವಂತಾಗಿದೆ. ಮಳೆಗಾಲ ಆರಂಭವಾದರೂ ಇನ್ನೂ ಎಲ್ಲಾ ಕಡೆ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಜನತೆ ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಮಳೆಗಾಲ ಕಾಮಗಾರಿ ಮಾಡುತ್ತಿರುವುದರಿಂದ ರಸ್ತೆಗೆ ಹೆಚ್ಚಿನ ಹಾನಿಯಾಗುತ್ತಿದೆ. ಮಳೆಗಾಲದಲ್ಲಿ ಪೈಪ್ ಲೈನ್ ಕಾಮಗಾರಿ ಸ್ಥಗಿತಗೊಳಿಸದಿದ್ದರೇ ಇನ್ನೂ ಹೆಚ್ಚಿನ ಅನಾಹುತಗಳಿಗೆ ದಾರಿಮಾಡಿಕೊಡುವ ಸಾಧ್ಯತೆಯಿದೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಗಮನ ಹರಿಸಿ ಕ್ರಮಕೈಗೊಳ್ಳಬೇಕಿದೆ.
