
ಬೆಳ್ಳಾರೆ ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿಯ 2024 – 25 ನೇ ಸಾಲಿನ ವಾರ್ಷಿಕ ಸಭೆ ಮೇ. 13 ರಂದು ಬೆಳ್ಳಾರೆಯ ಸ್ನೇಹ ಸದನ ಸಭಾಂಗಣದಲ್ಲಿ ನಡೆಯಿತು. ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷರಾದ ಚಂದ್ರಹಾಸ ಮಣಿಯಾಣಿ ಪಡ್ಪು ಇವರ ಅಧ್ಯಕ್ಷತೆಯಲ್ಲಿ ಜರುಗಿತು. 2024-25ನೇ ಸಾಲಿನ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ವಸಂತ ಗೌಡ ಪಡ್ಪು, ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ತೀರ್ಥರಾಮ ಗೌಡ ಗುಡ್ಡೆಮನೆ ಸಭೆಗೆ ಮಂಡಿಸಿದರು. ಸಭೆಯು ಸರ್ವಾನುಮತದಿಂದ ಅಂಗೀಕಾರ ನೀಡಿತು. ಬಳಿಕ ಮುಂದಿನ ವರ್ಷಕ್ಕೆ ಸಿದ್ದಪಡಿಸಿದ ಕಾರ್ಯಕ್ರಮಗಳಿಗೆ ಅನುಮೋದನೆ ನೀಡಲಾಯಿತು. ನಂತರ 2025-26 ಅವಧಿಗೆ ನೂತನ ಸಮಿತಿಯನ್ನು ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಚಂದ್ರಹಾಸ ಮಣಿಯಾಣಿ ಪಡ್ಪು ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ತಡಗಜೆ ಕೋಶಾಧಿಕಾರಿಯಾಗಿ ತೀರ್ಥರಾಮ ಗೌಡ ಗುಡ್ಡೆಮನೆ ಮಣಿಮಜಲು ಉಪಾಧ್ಯಕ್ಷರು ಮನೋಹರ ಪಿ ಎಂ ದಾಸನಮಜಲು,ಜತೆ ಕಾರ್ಯದರ್ಶಿ ಜನಾರ್ಧನ ಪೂಜಾರಿ ಚೀಮುಳ್ಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀನಿವಾಸ ಕುರುಂಬುಡೇಲು, ವಸಂತ ಉಲ್ಲಾಸ್,ಶಶಿಧರ ಮಣಿಯಾಣಿ ಬೀಡು,ವಸಂತ ಗೌಡ ಪಡ್ಪು, ಪದ್ಮನಾಭ ಚು0ತಾರು, ವಿಜಯ್ ಕೂಡಣಕಟ್ಟೆ ಇವರುಗಳನ್ನು ಆಯ್ಕೆ ಮಾಡಲಾಯಿತು ನಿಕಟಪೂರ್ವಧ್ಯಕ್ಷ ಬಾಲಕೃಷ್ಣ ಪೂಜಾರಿ ಚೀಮುಳ್ಳು, ಗೌರವಾಧ್ಯಕ್ಷರಾದ ಆನಂದ ರೈ ಪುಡ್ಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
