
ಗೋಲ್ಡನ್ ಕ್ಲಬ್ ಸುಳ್ಯ ವತಿಯಿಂದ ಸುಳ್ಯದ ಅಮೃತ ಭವನದಲ್ಲಿ ಜಿಬಿಎಲ್ ಟ್ರೋಪಿ 2025 ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಿತು.ಉದ್ಘಾಟನಾ ಸಮಾರಂಭ ದ ವೇದಿಕೆಯಲ್ಲಿ ಕೆಪಿಸಿಸಿ ಸಂಯೋಜಕರಾದ ಪ್ರದೀಪ್ ಕುಮಾರ್ ರೈ ಪಾಂಬರು ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು ಮುಖ್ಯ ಅಥಿತಿಗಳಾಗಿ ಜೇಸಿಐ ಭಾರತದ ವಲಯ 15ರ ವಲಯ ಸಂಯೋಜಕರಾದ ಗುರುಪ್ರಸಾದ್ ನಾಯಕ್ ಉಪಸ್ಥಿತರಿದ್ದು ಶುಭ ಹಾರೈಸಿದರು,
ಸಭಾ ವೇದಿಕೆಯಲ್ಲಿ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಶಿವ ಮಿಲಿಟರಿ ಗ್ರೌಂಡ್, ದೈಹಿಕ ಶಿಕ್ಷಕ ರಂಗನಾಥ್, ರಾಮ್ ಕುಮಾರ್. ನಾಗಪಟ್ಟಣ,ಮತ್ತು ಕೌಶಿಕ್ ಸುಬ್ರಹ್ಮಣ್ಯ ತೀರ್ಪುಗಾರರು ಉಪಸ್ಥಿತರಿದ್ದರು,ಗೋಲ್ಡನ್ ಕ್ಲಬ್ ಸುಳ್ಯದ ಎಲ್ಲಾ ಸದಸ್ಯರು ಸಹಕರಿಸಿದರು
