
ಸುಳ್ಯದ ಉಪನ್ಯಾಸಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರು ಪ್ರಸ್ತುತ ಪಡಿಸಿದ **ಮನಸ್ಸು – ಮನುಷ್ಯನ ವ್ಯಕ್ತಿತ್ವದ ತಳಹದಿ” ವಿಷಯದ ಕುರಿತ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ದಿನಾಂಕ 25-04-2025 ರ ಶುಕ್ರವಾರದಂದು ರಾತ್ರಿ 8.30ಕ್ಕೆ ಬಿತ್ತರಗೊಳ್ಳಲಿದೆ. ಇದನ್ನು ಮಂಗಳೂರು ಆಕಾಶವಾಣಿಯ 100.3FM ನಲ್ಲಿ ಆಲಿಸಬಹುದು. ಈ ಹಿಂದೆ ಮಂಗಳೂರು ಹಾಗೂ ಮಡಿಕೇರಿ ಆಕಾಶವಾಣಿಗಳಲ್ಲಿ ಹಲವು ಬಾರಿ ಇವರ ಭಾಷಣಗಳು,ಕವಿತೆಗಳು, ಅರೆಭಾಷೆ ಹಾಗೂ ತುಳು ಕಾರ್ಯಕ್ರಮಗಳು ಬಿತ್ತರಗೊಂಡುದುದಲ್ಲದೇ ಡಿ ಡಿ ಚಂದನದಲ್ಲೂ ತರಬೇತಿ ನೀಡಿದ ಹೆಗ್ಗಳಿಕೆ ಇವರದು.
