
ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಡಾ.ಸೋಮಶೇಖರ್ ಕಟ್ಟೆಮನೆ ಹಾಗೂ ಉಪಾಧ್ಯಕ್ಷರಾಗಿ ಗಣೇಶ್ ಭಟ್ ಇಡ್ಯಡ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಆಡಳಿತ ಮಂಡಳಿಗೆ ಜ.19 ರಂದು ಚುನಾವಣೆ ನಡೆದಿದ್ದು, ಆ ಬಳಿಕ ಎರಡು ತಂಡಗಳು ನ್ಯಾಯಾಲಯದ ಕದ ತಟ್ಟಿದ್ದರಿಂದ ಫಲಿತಾಂತ ಘೋಷಣೆ ವಿಮಬವಾಗಿತ್ರು.
ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಹೈಕೋರ್ಟ್ ಚುನಾವಣಾ ಫಲಿತಾಂಶ ಘೋಷಿಸಲು ಆದೇಶ ನೀಡಿತ್ತು. ಅದರಂತೆಯೇ ಏ.05 ರಂದು ಕೋರ್ಟ್ ಆದೇಶ ಪ್ರತಿ ಸಹಕಾರಿ ಇಲಾಖೆಯ ಡಿ.ಆರ್ ರವರ ಕೈ ಸೇರಿ ಫಲಿತಾಂಶ ಘೋಷಣೆ ಯಾಗಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಗೆಲುವು ಸಾಧಿಸಿತ್ತು.
ಏ.23 ಸಂಘದ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸಂಘದ ನೂತನ ಅಧ್ಯಕ್ಷತೆಗೆ ಡಾ.ಸೋಮಶೇಖರ್ ಕಟ್ಟೆಮನೆ ಹಾಗೂ ಉಪಾಧ್ಯಕ್ಷತೆಗೆ ಗಣೇಶ್ ಭಟ್ ಇಡ್ಯಡ್ಕ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷತೆಗೆ ಡಾ.ಸೋಮಶೇಖರ್ ಕಟ್ಟೆಮನೆ ರವರ ಹೆಸರನ್ನು ನಿರ್ದೇಶಕರಾದ ಡ್ಯಾನಿ ಯಲದಾಳು ಹಾಗೂ ಉಪಾಧ್ಯಕ್ಷತೆಗೆ ಗಣೇಶ್ ಭಟ್ ಇಡ್ಯಡ್ಕ ರವರ ಹೆಸರನ್ನು ನಿರ್ದೇಶಕರಾದ ಕಮಲಾಕ್ಷ ಮುಳ್ಳುಬಾಗಿಲು ಸೂಚಿಸಿದರು.
ಈ ಸಂದರ್ಭದಲ್ಲಿ ಸಂಘದ ನೂತನ ನಿರ್ದೇಶಕರುಗಳಾದ ಶೇಷಪ್ಪ ಕಿರಿಭಾಗ, ಹಿಮ್ಮತ್.ಕೆ.ಸಿ, ರೇಗನ್ ಶೆಟ್ಯಡ್ಕ, ಗೋಪಾಲಕೃಷ್ಣ, ಬೊಳಿಯ ಅಜಿಲ, ವೇದಾವತಿ ಮುಳ್ಳುಬಾಗಿಲು, ಮಹಾಲಿಂಗ ನಾಯ್ಕ ಹಾಗೂ ಮೇನಕಾ ಕೊಪ್ಪಡ್ಕ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಉಪಸ್ಥಿತರಿದ್ದರು.
ಚುನಾವಣಾ ಅಧಿಕಾರಿ ಶಿವಲಿಂಗಯ್ಯ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನಮನೆ ಹಾಗೂ ವಲಯ ಮೇಲ್ವಿಚಾರಕರಾದ ಮನೋಜ್ ಮಾಣಿಬೈಲು ಸಹಕರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ, ವಿನಯ್ ಮುಳುಗಾಡು, ಕೃಷ್ಣಯ್ಯ ಮೂಲೆತೋಟ, ಚಂದ್ರಹಾಸ ಶಿವಾಲ ಹಾಗೂ ಬಿಜೆಪಿ ನಾಯಕರು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)
