
ಜೇಸಿಐ ಪಂಜ ಪಂಚಶ್ರೀ, ಭಾರತ್ ಸ್ಕೌಟ್ & ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ವತಿಯಿಂದ ಈಜು ತರಬೇತಿ ಶಿಬಿರ ಮರಕತ ರಸ್ತೆ ಬಳಿ ಇರುವ ಏನೇಕಲ್ಲು ಹೊಳೆಯಲ್ಲಿ ಎ. 20ರಂದು ಉದ್ಘಾಟನೆ ಗೊಂಡಿತು.
ಭಾರತ್ ಸ್ಕೌಟ್ & ಗೈಡ್ಸ್ ಕರ್ನಾಟಕ ಇದರ ರಾಜ್ಯ ಮುಖ್ಯ ಆಯುಕ್ತರಾದ ಮಾಜಿ ಸಚಿವ, ಪಿ ಜಿ ಆರ್ ಸಿಂಧ್ಯಾರವರು ತರಬೇತಿ ಶಿಬಿರ ಉದ್ಘಾಟಿಸಿದರು.
ಜೇಸಿಐ ಪಂಜ ಪಂಚಶ್ರೀಯ ಅಧ್ಯಕ್ಷ ವಾಚಣ್ಣ ಕೆರೆಮೂಲೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೇಸಿಐ ಭಾರತ ಪೂರ್ವ ರಾಷ್ಟೀಯ ಉಪಾಧ್ಯಕ್ಷ ಪುರಂದರ ರೈ, ಜಿಲ್ಲಾ ಗೈಡ್ಸ್ ಆಯುಕ್ತೆ ವಿಮಲಾ ರಂಗಯ್ಯ, ರಾಷ್ಟೀಯ ಈಜು ತರಬೇತುದಾರ ಯಶವಂತ ಬಿ, ರಾಷ್ಟ್ರ ಮಟ್ಟದ ಈಜು ಪಟು ಶ್ರೀಕಾಂತ್ ಪ್ರಭು, ವಲಯ ಸಂಯೋಜಕ ಲೋಕೇಶ್ ಅಕ್ರಿಕಟ್ಟೆ, ಜೇಸಿಐ ಪಂಜ ಪಂಚಶ್ರೀ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ ಉಪಸ್ಥಿತರಿದ್ದರು.
ಗಮನ ಸೆಳೆದ 76 ವರ್ಷದ ಪಿ ಜಿ ಆರ್ ಸಿಂಧ್ಯಾ ಈಜಾಟ
ತರಬೇತಿ ಶಿಬಿರ ಉದ್ಘಾಟನೆಗೆ ಆಗಮಿಸಿದ ಭಾರತ್ ಸ್ಕೌಟ್ & ಗೈಡ್ಸ್ ಕರ್ನಾಟಕ ಇದರ ರಾಜ್ಯ ಮುಖ್ಯ ಆಯುಕ್ತರಾದ ಮಾಜಿ ಸಚಿವ, ಪಿ ಜಿ ಆರ್ ಸಿಂದ್ಯರವರು ತನ್ನ 76 ನೇ ವಯಸ್ಸಿನಲ್ಲಿಯೂ ಹೊಳೆಯಲ್ಲಿ ಮಕ್ಕಳೊಂದಿಗೆ ಈಜಾಟ ನಡೆಸಿ ಗಮನ ಸೆಳೆದರು.

