61 ದಿನ ಪೂರೈಸಿದ “ಭಾವ ತೀರ ಯಾನ” ಸಿನಿಮಾ ಎ.22 ರಂದು ಕೊನೆಯ ಪ್ರದರ್ಶನ ನೀಡುವುದೆಂದು ಚಿತ್ರದ ನಿರ್ದೇಶಕರು ತೀರ್ಮಾನಿಸಿದ್ದರು. ಆದರೇ ಎ.22 ರಂದು ಪ್ರೇಕ್ಷಕರ ಭಾರಿ ಬೆಂಬಲದ ಹಿನ್ನೆಲೆಯಲ್ಲಿ ಪುತ್ತೂರಿನ ಭಾರತ್ ಸಿನೇಮಾಸ್ ನವರು ಚಿತ್ರಪ್ರದರ್ಶನ ನಿಲ್ಲಿಸುವುದು ಬೇಡ ಮುಂದುವರೆಸೋಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆದುದರಿಂದ ಎ.23 ಬುಧವಾರ ಸಂಜೆ 4.45ಕ್ಕೆ ಚಿತ್ರದ ಪ್ರದರ್ಶನಗೊಳ್ಳಲಿದೆ. ಈ ಚಿತ್ರಕ್ಕೆ ಸುಳ್ಯದ ಯುವ ಪ್ರತಿಭೆ ಯುವ ಸಂಗೀತ ನಿರ್ದೇಶಕ ಮಯೂರ ಅಂಬೆಕಲ್ಲು ಚಿತ್ರ ನಿರ್ದೇಶನ ಮಾಡಿದ್ದಾರೆ.
