
ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ (ರಿ) ಆಶ್ರಯದಲ್ಲಿ ಎ. 11 ರಿಂದ ಎ. 20ರವರೆಗೆ ನಡೆದ ವಾಲಿಬಾಲ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಪ್ರಯುಕ್ತ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಎ. 20 ರಂದು ಹೊನಲು ಬೆಳಕಿನಲ್ಲಿ ನಡೆಯಿತು. ಸುಳ್ಯ ತಾಲೂಕಿನ 18 ಗ್ರಾಮಗಳ 18 ತಂಡಗಳು ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದವು. ಫೈನಲ್ ಪ್ರವೇಶಿಸಿದ ಅಜ್ಜಾವರ ಮತ್ತು ಅಡ್ಕಾರ್ ತಂಡಗಳು ಅತ್ಯುತ್ತಮ ಕಠಿಣ ಸ್ಪರ್ಧೆ ನೀಡಿ ಅಜ್ಜಾವರ ತಂಡ ಪ್ರಥಮ ಸ್ಥಾನವನ್ನು ಪಡೆದು ಚಾಂಪಿಯನ್ ಆಗಿ ಹೊರಹೋಮ್ಮಿತು. ಅಡ್ಕಾರ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಬಹುಮಾನ ವಿತರಣೆ:
ಮುಂಜಾನೆ 4:00 ಗಂಟೆಗೆ ಮುಕ್ತಾಯಗೊಂಡ ಪಂದ್ಯಾಟದ ಬಹುಮಾನವನ್ನು ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಉಪಾಧ್ಯಕ್ಷ ಗೋಕುಲ್ ದಾಸ್, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕುಡೆಕಲ್ಲು, ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ, ವಿಜೇತ ತಂಡಗಳಿಗೆ ವಿತರಿಸಿದರು. ನಿರ್ದೇಶಕರುಗಳಾದ ಸುದರ್ಶ ಕೆ ಎಸ್, ರಜ್ಜು ಬಯ್ಯ, ಹಾಗೂ ರಜಾಕ್ ರವರು ಉಪಸ್ಥಿತರಿದ್ದರು. ವಾಲಿಬಾಲ್ ಅಸೋಸಿಯೇಶನ್ ನಿರ್ದೇಶಕ ಶಶಿಧರ್ ಎಂ ಜೆ ಕಾರ್ಯಕ್ರಮ ನಿರೂಪಿಸಿದರು.
