
ಪಂಜದ ಉತ್ಕರ್ಷ ಸಹಕಾರಿ ಸೌಧದಲ್ಲಿ ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ ಇದರ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಪಂಜ, ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ, ಕಲಾಮಂದಿರ ಡ್ಯಾನ್ಸ್ ಕ್ರೂ ಪಂಜ ಇವುಗಳ ಸಹಕಾರದೊಂದಿಗೆ ನಡೆಯುತ್ತಿರುವ ನಲಿ ಕಲಿ ಮಕ್ಕಳ ಬೇಸಿಗೆ ಶಿಬಿರದ ಐದನೇ ದಿನದ ಸಂಪನ್ಮೂಲ ವ್ಯಕ್ತಿ ಗಳಾಗಿ ಅಂತರಾಷ್ಟ್ರೀಯ ಖ್ಯಾತಿಯ ಹಿಪ್ನೋಟಿಸಂ ಕಲಾವಿದ ಕೃಷ್ಣಮೂರ್ತಿ ವಿಶಾಖಪಟ್ಟಣಂ ಭಾಗವಹಿಸಲಿದ್ದಾರೆ.ಅಪರಾಹ್ನ
ಪ್ರತಿಭಾನ್ವಿತ ಕಲಾವಿದೆಯಾಗಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಂದನ ರೈ ಕಾರ್ಕಳ ನಾಳೆಯ ಶಿಬಿರದಲ್ಲಿ ಭಾಗವಹಿಸುವ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿದ್ದು ವೈವಿಧ್ಯಮಯ ಅಭಿನಯ ಗೀತೆಯ ಮೂಲಕ ರಂಜಿಸಲಿದ್ದಾರೆ.
