Ad Widget

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ.

135ನೇ ಜಯಂತಿ ನೂತನ ಅಂಬೇಡ್ಕರ್ ಭವನದಲ್ಲಿ ಆಗುವಂತಾಗಲಿ – ಶಾಸಕಿ ಮುರುಳ್ಯ.

. . . . . . . . .

ಸುಳ್ಯ : ಸುಳ್ಯ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆ‌ರ್.ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣೆ ಸೋಮವಾರ ಬಂಟರ ಭವನದಲ್ಲಿ ನಡೆಯಿತು.ಸಭಾ ಕಾರ್ಯಕ್ರಮದ ಉದ್ಘಾಟಕರು ಹಾಗೂ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಶಾಸಕಿ ಕು.ಭಾಗೀರಥಿ ಮುರುಳ್ಯ ಮಾತನಾಡುತ್ತ ಮೊದಲ ಸಭೆಗೆ ಅಧಿಕಾರಿಗಳು ಗೈರಾಗಿದ್ದು ಈ ಕುರಿತ ವರದಿಗಳು ಬಂದ ಬಳಿಕ ಅಧಿಕಾರಿಗಳು ಎಚ್ಚೆತ್ತು ಒಗ್ಗಟ್ಟಿನ ಮೂಲಕ ಕೆಲಸ ನಿರ್ವಹಿಸಿದ ಫಲವಾಗಿ ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ಹಬ್ಬವಾಗಿ ಈ ಕಾರ್ಯಕ್ರಮ ಬದಲಾಗಿದೆ. ಸುಳ್ಯ ತಾಲೂಕಿನಲ್ಲಿ ಬಹುತೇಕ ಎಲ್ಲಾ ಅಧಿಕಾರಿಗಳು ಮತ್ತು ನಾನು ಅಂಬೇಡ್ಕರ್ ರಚಿಸಿದ ಸಂವಿಧಾನದ ಆಧಾರದ ಮೇಲೆಯೇ ಈ ವೇದಿಕೆಯಲ್ಲಿ ಕುಳಿತುಕೊಳ್ಳುವಂತೆ ಆಗಿದೆ. ಶಾಸಕರು ತಡವಾಗಿ ಕಾರ್ಯಕ್ರಮಕ್ಕೆ ಬರುತ್ತಾರೆ ಅನ್ನುವವರೇ ಈ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಾರೆ. ನಮಗೆ ರಸ್ತೆಯಲ್ಲಿ ಕಛೇರಿ ಬಳಿಯಲ್ಲಿ ನೂರಾರು ಜನರು ಸಮಸ್ಯೆಗಳ ಪಟ್ಟಿಯನ್ನು ಹಿಡಿದು ಕಾದು ನಿಂತಿರುತ್ತಾರೆ ಅವರನ್ನು ನಿರಾಶೆಗೊಳಿಸಿ ಕಾರ್ಯಕ್ರಮಕ್ಕೆ ಬರಲು ಆಗಲ್ಲ. ಅವರ ಕಷ್ಟಗಳಿಗೆ ಸ್ಪಂದಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ತಿರುಗೇಟು ನೀಡಿದರು. ಅಲ್ಲದೇ ಮುಂದಿನ ವರ್ಷದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವು ನೂತನ ಅಂಬೇಡ್ಕರ್ ಭವನದಲ್ಲಿ ಆಗುವಂತೆ ಮಾಡಲು ನಾವೆಲ್ಲ ಶ್ರಮಿಸೋಣ ಹಾಗೂ ಪರಿಶಿಷ್ಟ ಜಾತಿ ಪಂಗಡದ ಯುವ ಜನತೆ ಚಿಂತೆಯಲ್ಲಿ ಇರದೇ ಚಿಂತನಶೀಲರಾಗಿ ಶಿಕ್ಷಣವನ್ನು ಪಡೆದು ಉನ್ನತ ಮಟ್ಟದ ಅಧಿಕಾರಿಗಳಾಗಬೇಕು ಎಂದು ಹೇಳಿದರು.

ಉಪನ್ಯಾಸಕಿ ಆಶಾಲತಾ ಮಾತನಾಡಿ ಅಂಬೇಡ್ಕರ್ ಯಾರು ಮತ್ತು ಯಾಕಾಗಿ ಎಲ್ಲರಿಗಿಂತಲೂ ಶ್ರೇಷ್ಠ ಅನ್ನುವುದನ್ನು ಅರಿತುಕೊಳ್ಳಬೇಕಿದೆ. ಅಂಬೇಡ್ಕರ್ ಶೋಷಿತರ ಪರವಾಗಿ ನಿರಂತರವಾಗಿ ಧ್ವನಿ ಎತ್ತಿದ ವ್ಯಕ್ತಿಯಾಗಿದ್ದು ರಾಷ್ಟ್ರ ನಿರ್ಮಾಣ ಚಿಂತನೆಯಲ್ಲಿ ರೈತರು , ಕಾರ್ಮಿಕರು, ಮಹಿಳೆಯರು ,ನೀರಾವರಿ , ಆರ್ಥಿಕ ವ್ಯವಸ್ಥೆಯನ್ನು ಗಟ್ಟಿ ಗೊಳಿಸಲು ತಮ್ಮ ಧ್ವನಿಯನ್ನು ಎತ್ತಿದವರು. ಅಂಬೇಡ್ಕರ್ ಹೇಳಿದಂತೆ ಮೊದಲು ನಾವು ಭಾರತೀಯರು ಕೊನೆಯು ನಾವು ಭಾರತೀಯರೇ ಎಂಬುವುದು ಅಂಬೇಡ್ಕರ್ ಆಶಯವಾಗಿದೆ. ಪ್ರಭುತ್ವ ಮತ್ತು ಅಲ್ಪಸಂಖ್ಯಾತರು ಎಂಬ ಪುಸ್ತಕದಲ್ಲಿ ಅವರು ಸಮಾನತೆ , ಶಿಕ್ಷಣ , ಆರೋಗ್ಯದ ಬಗ್ಗೆ ಚಿಂತಿತರಾಗಿದ್ದರು ಅಲ್ಲದೇ ಅಲ್ಪಸಂಖ್ಯಾತರು ಎಂದರೆ ಅತೀ ಕಡಿಮೆ ಜನಸಂಖ್ಯೆ ಹೊಂದಿದ್ದು ಶಬ್ದವನ್ನು ಎತ್ತಲು ಅಸಾಧ್ಯವಾದವರನ್ನು ಅಂಬೇಡ್ಕರ್ ಅಲ್ಪಸಂಖ್ಯಾತರು ಎಂದು ಬಣ್ಣಿಸಿದ್ದಾರೆ. ಅಲ್ಲದೇ ಇಂದಿನ ಕಾಲಘಟ್ಟದಲ್ಲಿ ಜಾತಿ , ಧರ್ಮ , ಲಿಂಗ ಆಧಾರಿತ ತಾರತಮ್ಯವನ್ನು ಕಾಣುತ್ತಿದ್ದು ಅವುಗಳನ್ನು ಹೋಗಲಾಡಿಸಿದರೆ ಮಾತ್ರ ಅಂಬೇಡ್ಕರ್ ಈ ಜಯಂತಿಯ ಮೂಲಕ ಒಂದು ಅರ್ಥ ಬರುತ್ತದೆ . ಅಲ್ಲದೇ ದೇಶದಲ್ಲಿ ಇದೀಗ ಪ್ರಧಾನಮಂತ್ರಿ ಸಂವಿಧಾನದ ಓದು ಸೇರಿದಂತೆ ಅಂಬೇಡ್ಕರ್ ಕುರಿತಾಗಿ ಹತ್ತು ಹಲವು ಯೋಜನೆಯನ್ನು ತರುತ್ತಿದ್ದು ಇದು ಅಂಬೇಡ್ಕರ್ ಗೆ ನೀಡುವ ನಿಜವಾದ ಗೌರವವಾಗಿದೆ ಎಂದು ಉಪನ್ಯಾಸದಲ್ಲಿ ಹೇಳಿದರು.

ಸಭಾ ವೇದಿಕೆಯಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದರೆ , ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ , ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ , ನಗರ ಪ್ರಾಧಿಕಾರ ಅಧ್ಯಕ್ಷ ಕೆ ಎಂ ಮುಸ್ತಫಾ, ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ತಹಶೀಲ್ದಾರ್ ಮಂಜುಳಾ ಎಂ , ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ , ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಜಿ.ಕೆ ಉಮಾದೇವಿ ,ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಹೆಚ್ ಸುಧಾಕರ, ಯನ್ ಜಯಪ್ರಕಾಶ್ ರೈ , ಸೇರಿದಂತೆ ಮುಖಂಡರು ಜನಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಮತ ಕೆ ಸ್ವಾಗತಿಸಿ ಮಮತ ಎಸ್ ಕೆ ಕಾರ್ಯಕ್ರಮ ನಿರೂಪಿಸಿ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಕೃಷ್ಣ ವಂದಿಸಿದರು.ಸಭಾ ಕಾರ್ಯಕ್ರಮದ ಪೂರ್ವ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು.ಮೆರವಣಿಗೆಯಲ್ಲಿ ಇಲಾಖಾಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಮೆರವಣಿಗೆಗಲ್ಲಿ ಸಾಗಿದರು.ಜೊತೆಗೆ ಗ್ರಾಮ ಮಟ್ಟದ ಅಭಿವೃದ್ಧಿ ಅಧಿಕಾರಿಗಳ ಗೈರು ಹಾಜರಾತಿ ಹೊರತು ಪಡಿಸಿ ಆಶಾ ಕಾರ್ಯಕರ್ತೆಯರು , ಆರೋಗ್ಯ ಕಾರ್ಯಕರ್ತೆಯರು ಸಂಘಟನೆಗಳ ಕಾರ್ಯಕರ್ತರು ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!