
ಏ.04 ಶುಕ್ರವಾರದಂದು ಆಲೆಟ್ಟಿ ಗೌಡ ಗ್ರಾಮ ಸಮಿತಿಯ ಅಧ್ಯಕ್ಷರಾದ ಸತೀಶ್ ಕೊಯಿಂಗಾಜೆ ಯವರ ಅಧ್ಯಕ್ಷತೆಯಲ್ಲಿ ಶ್ರೀ ಮೂಕಾಂಬಿಕಾ ಭಜನಾ ಮಂದಿರ ಸಭಾಂಗಣದಲ್ಲಿ ಅರಂಬೂರು ಗೌಡರ ಉಪಸಮಿತಿಯ ಸಭೆ ನಡೆಯಿತು.
ವೇದಿಕೆಯಲ್ಲಿ ಅರಂತೋಡು ವಲಯ ಉಸ್ತುವಾರಿ ತಾಲೂಕು ಸಮಿತಿಯ ಉಪಾಧ್ಯಕ್ಷರಾದ ಯತಿರಾಜ್ ಭೂತಕಲ್ಲು,ತಾಲೂಕು ಸಮಿತಿಯ ನಿರ್ದೇಶಕರಾದ ಜಗದೀಶ್ ಸರಳಿಕುಂಜ, ಹಿರಿಯರಾದ ನೆಡ್ಚಿಲ್ ಹುಕ್ರಪ್ಪ ಗೌಡ, ಸಲಹಾ ಸಮಿತಿಯ ಸದಸ್ಯರಾದ ಶ್ರೀಮತಿ ಹರಾವತಿ ಕುಡೆಕಲ್ಲು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗೌಡ ಉಪಸಮಿತಿಯನ್ನು ರಚನೆ ಮಾಡಲಾಯಿತು. ಪುರುಷ ಸಮಿತಿಯ ಅಧ್ಯಕ್ಷರಾಗಿ ಮನೋಹರ ಅರಂಬೂರು, ಉಪಾಧ್ಯಕ್ಷರಾಗಿ ಕೃಷ್ಣಪ್ಪ ಕೆದಂಬಾಡಿ, ಪ್ರಧಾನ ಕಾರ್ಯದರ್ಶಿಯಾಗಿ ನೆಡ್ಚಿಲ್ ಗಂಗಾಧರ.ಎಸ್, ಜೊತೆ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಪಡ್ಪು ಹಾಗೂ ಸದಸ್ಯರುಗಳಾಗಿ ಸುಧಾಕರ್ ಬೆಳ್ಳಿಪ್ಪಾಡಿ, ಕೃಷ್ಣಪ್ರಸಾದ್ ಬದಿಕಾನ, ಉದಯ ಕುಮಾರ್ ಕುಮಾರಪ್ರಭಾ, ದೀಕ್ಷಿತ್ ಪಾಲಡ್ಕ, ತೇಜಸ್ ಚಿದ್ಗಲ್, ಜಯಶಂಕರ್ ಪಡ್ಪು, ಶಿವಪ್ರಸಾದ್ ಪರಿವಾರ, ಗುರುಪ್ರಸಾದ್ ಕುಡೆಕಲ್ಲು ಹಾಗೂ ಗೌರವ ಸಲಹೆಗಾರರಾಗಿ ಎ.ಸಿ ವಸಂತ, ಚಂದ್ರಶೇಖರ ನೆಡ್ಚಿಲ್, ಪದ್ಮಯ್ಯ ಪಡ್ಪು ಇವರುಗಳನ್ನು ಆಯ್ಕೆ ಮಾಡಲಾಯಿತು.
ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಡಾ| ಅನುರಾಧ ಕುರುಂಜಿ, ಉಪಾಧ್ಯಕ್ಷರಾಗಿ ರಾಜೀವಿ ಅರಂಬೂರು, ಪ್ರಧಾನ ಕಾರ್ಯದರ್ಶಿಯಾಗಿ ವೇದಾವತಿ ನೆಡ್ಚಿಲ್, ಜೊತೆ ಕಾರ್ಯದರ್ಶಿಯಾಗಿ ಕವಿತಾ ಕುಡೆಕಲ್ಲು, ಸದಸ್ಯರುಗಳಾಗಿ ಚಂದ್ರಾವತಿ ಬದಿಕಾನ, ಕವಿತಾ ಕುಡೆಕಲ್ಲು, ಸವಿತಾ ಸರಳಿಕುಂಜ, ಗಾಯತ್ರಿ ನೆಡ್ಚಿಲ್, ಪುಷ್ಪಾವತಿ ಕುಡೆಕಲ್ಲು, ಸುಮನಾ ನೆಡ್ಚಿಲ್ ಹಾಗೂ ಗೌರವ ಸಲಹೆಗಾರರಾಗಿ ಹರಾವತಿ ಕುಡೆಕಲ್ಲು, ಉಷಾ ಚಂದ್ರಶೇಖರ ಸರಳಿಕುಂಜ ಇವರುಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಆಲೆಟ್ಟಿ ಗ್ರಾಮದ ಗೌಡ ಸಮಿತಿಯ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಮಂದಿ ಗೌಡ ಸ್ವಜಾತಿ ಬಂಧುಗಳು ಭಾಗವಹಿಸಿದ್ದರು.
ಆಲೆಟ್ಟಿ ಗ್ರಾಮ ಸಮಿತಿಯ ಕಾರ್ಯದರ್ಶಿ ಆಶೋಕ್ ಪೀಚೆ ಕಲ್ಚರ್ಪೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
