Ad Widget

ತಾಲೂಕು ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸಾ ಯಂತ್ರದ ಉದ್ಘಾಟನಾ ಕಾರ್ಯಕ್ರಮ ಕಾಂಗ್ರೆಸ್ ನಾಯಕರ ಒತ್ತಡದಿಂದ ರದ್ದು – ವೆಂಕಟ್ ವಳಲಂಬೆ ಖಂಡನೆ

ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ಯಂತ್ರ ಉದ್ಘಾಟನಾ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ನಾಯಕರ ಒತ್ತಡದಿಂದ ರದ್ದುಗೊಳಿಸಿರುವುದನ್ನು ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಖಂಡಿಸಿದ್ದಾರೆ. ಆರೋಗ್ಯ ಜನಸಾಮಾನ್ಯರ ಅಗತ್ಯತೆಯಲ್ಲೊಂದು ಈ ಹಿನ್ನೆಲೆಯಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ಯಂತ್ರ ಉದ್ಘಾಟನೆಯಾಗಬೇಕಿತ್ತು ಆದರೆ ಸರ್ಕಾರದಿಂದ ನಾಮ ನಿರ್ದೇಶನಗೊಂಡ ಕಾಂಗ್ರೆಸ್ ನ ಗ್ಯಾರಂಟಿ ಅನುಷ್ಠಾನ ಸಮಿತಿ ಮತ್ತು ಸೂಡ ಅಧ್ಯಕ್ಷರನ್ನು ಆಮಂತ್ರಣ ಪತ್ರದಲ್ಲಿ ಹೆಸರಿಲ್ಲವೆಂಬ ಕಾರಣಕ್ಕೆ ಡಿ.ಹೆಚ್.ಓ ಗೆ ದೂರು ನೀಡಿದ್ದು ಇದೀಗ ಕಾರ್ಯಕ್ರಮ ರದ್ದುಗೊಂಡಿದೆ.

. . . . . . . . .

ಇಂತಹ ಆರೋಗ್ಯ ಸಂಬಂಧಿತ ಉದ್ಘಾಟನಾ ವಿಚಾರಗಳಲ್ಲಿ ಚಿಲ್ಲರೆ ರಾಜಕೀಯ ತಂದಿರುವುದನ್ನು ಬಿಜೆಪಿ ಖಂಡಿಸುತ್ತದೆ, ಕ್ಷೇತ್ರದ ಜನಸಾಮಾನ್ಯರು ನಿಮ್ಮ ಈ ವರ್ತನೆಗೆ ತಕ್ಕದಾದ ಉತ್ತರ ನೀಡಲಿದ್ದಾರೆ.ನಿಮಗೆ ಈ ವಿಚಾರವಾಗಿ ಬೇರೆ ರೀತಿಯ ಅವಕಾಶಗಳಿದ್ದರು ಸರ್ಕಾರ ಮಟ್ಟದಲ್ಲಿ ಒತ್ತಡ ಹೇರಿ ಕಾರ್ಯಕ್ರಮವನ್ನು ರದ್ದುಪಡಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ತಕ್ಕುದಾದಲ್ಲ, ಅಭಿವೃದ್ಧಿ ವಿಚಾರವಾಗಿ ರಾಜಕೀಯ ಮಾಡಿ ಆದರೆ ಆರೋಗ್ಯ ಸಂಬಂಧಿತ ವಿಚಾರದಲ್ಲಿ ಈ ನಡವಳಿಕೆ ಸರಿಯಲ್ಲವೆಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!