
ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳಾದ ಚಂದ್ರಶೇಖರ ಬಟ್ಟೋಡಿ ರವರು ಮಾ.31 ರಂದು ಸೇವಾ ನಿವೃತ್ತರಾದರು.
1987ರಲ್ಲಿ ಗುಮಾಸ್ತರಾಗಿ ಸೇರ್ಪಡೆಯಾದ ಇವರು 2014ರಲ್ಲಿ ಹಿರಿಯ ಗುಮಾಸ್ತರಾಗಿ ಬಡ್ತಿಗೊಂಡು 2022 ರಲ್ಲಿ ಲೆಕ್ಕ ಪಾಲಕರಾಗಿ ಮುಂಬಡ್ತಿಗೊಂಡು ಸಹಕಾರಿ ಸಂಘದ ಕೊಲ್ಲಮೊಗ್ರು ಶಾಖಾ ಬ್ರಾಂಚ್ ಮ್ಯಾನೇಜರ್ ಆಗಿ ನೇಮಕಗೊಂಡರು. ನಂತರ 2023 ರಿಂದ ಸಹಕಾರಿ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು 38 ವರುಷಗಳ ಕಾಲ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸೇವೆ ಸಲ್ಲಿಸಿ ಮಾ.31 ರಂದು ನಿವೃತ್ತಿಗೊಂಡರು.
ನಡುಮುಟ್ಲು ಮನೆತನದವರಾಗಿರುವ ಇವರು ಕೊಲ್ಲಮೊಗ್ರು ಗ್ರಾಮದ ಬಟ್ಟೋಡಿ ದಿಟ ಐತ್ತಪ್ಪ ಗೌಡ ಹಾಗೂ ದಿಟ ದೀನಮ್ಮ ದಂಪತಿಗಳ ಪುತ್ರ.
ಇವರ ಪತ್ನಿ ಶ್ರೀಮತಿ ಕಿರಣ ರವರು ಗೃಹಿಣಿಯಾಗಿದ್ದು, ಪುತ್ರ ಶಶಾಂಕ್.ಬಿ.ಸಿ ಹಾಗೂ ಪುತ್ರಿ ಶ್ರಾವ್ಯ.ಬಿ.ಸಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.
