
ಮಂಡೆಕೋಲು ಶ್ರಿ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ 9 ಜನ ನೂತನ ಸದಸ್ಯರನ್ನು ಸರಕಾರ ಈ ಹಿಂದೆ ಆಯ್ಕೆ ಮಾಡಿತ್ತು. ಸಮಿತಿಯ ಮೊದಲ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸದಾನಂದ ಮಾವಜಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಮಿತಿಯಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಶಿವರಾಮ ಗೌಡ ಪೇರಾಲು, ಕೃಷಿಕ ಶುಭಕರ ಬೊಳುಗಲ್ಲು, ಉದ್ಯಮಿ ವಿಕಾಸ್ ಮೀನಗದ್ದೆ, ಸತೀಶ್ ಕಣೆಮರಡ್ಕ, ವೇದಾವತಿ ಕೇನಾಜೆ, ವಿದ್ಯಾಶ್ರೀ ಹರ್ಷಿತ್ ಮೈತಡ್ಕ ಪೇರಾಲು, ಸುಂದರ ನಾಯ್ಕ ಮೈಲೆಟ್ಟಿಪಾರೆ, ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ಶಿವಪ್ರಸಾದ್ ಸದಸ್ಯರಾಗಿದ್ದಾರೆ.