
ಮೀನು ಹಿಡಿಯಲು ತೆರಳಿದ್ದ ವ್ಯಕ್ತಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಮಾ. 16ರಂದು ಐನೆಕಿದು ಗ್ರಾಮದ ಗುಂಡಡ್ಕ ಬಳಿ ನಡೆದಿದೆ.
ಐನೆಕಿದು ಗ್ರಾಮದ ಗುಂಡಡ್ಕ ನಿವಾಸಿ ಜಗದೀಶ ಎಂಬವರು ಮೃತಪಟ್ಟ ವ್ಯಕ್ತಿ.
ಜಗದೀಶರವರು ಸಂಜೆ ವೇಳೆ ಗುಂಡಡ್ಕ ಬಳಿ ಮೀನು ಹಿಡಿಯಲು ಹೊಳೆಗೆ ತೆರಳಿದ್ದಾಗ ನೀರಲ್ಲಿ ಮುಳುಗಿದ್ದು, ಅವರೊಂದಿಗಿದ್ದ ಮಕ್ಕಳು ಮನೆಯವರಿಗೆ ಬಂದು ಅಪ್ಪ ನೀರಲ್ಲಿ ಮುಳುಗಿದ ವಿಚಾರ ತಿಳಿಸಿದ್ದಾರೆ. ಬಳಿಕ ಸ್ಥಳೀಯರು ತೆರಳಿ ನೀರಲ್ಲಿ ಮುಳುಗಿ ಹುಡುಕಾಡಿ ಮೃತ ದೇಹವನ್ನು ಮೇಲಕ್ಕೆತ್ತಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.