
ಮಾ.13 ರಂದು ಸಂಜೆ ಸುರಿದ ಮಳೆಗೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆನೆಗುಂಡಿಯಲ್ಲಿ 33/11 ಕೆ.ವಿ. ಲೈನ್ ಗೆ ಮರ ಬಿದ್ದ ಕಾರಣ ವಿದ್ಯುತ್ ಕಂಬ ಮುರಿದ ಹಿನ್ನೆಲೆಯಲ್ಲಿ ಸುಳ್ಯಕ್ಕೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಜತೆಗೆ ಇಲ್ಲಿ ಕಾವು ಸಬ್ ಸ್ಟೇಷನ್ ನಿಂದ ಬರುವ ಕನಕಮಜಲು 11 ಕೆ.ವಿ.ಪೀಡರ್ ನ 2 ಕಂಬಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದ್ದು, ಅಪರಾಹ್ನ ನಾಲ್ಕು ಗಂಟೆ ವೇಳೆಗೆ ದುರಸ್ತಿ ಕಾರ್ಯ ಮುಗಿದು ವಿದ್ಯುತ್ ಸರಬರಾಜು ಆಗುವ ನಿರೀಕ್ಷೆ ಇದೆ ಎಂದು ಮೆಸ್ಕಾಂ ಮೂಲಗಳಿಂದ ತಿಳಿದುಬಂದಿದೆ.