
ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್, ಒಡಿಯೂರು ಗುರುದೇವಾದತ್ತ ಸಂಸ್ಥಾನ, ಸಂಚಾಲಿತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಮಂಡೆಕೋಲು ಘಟಸಮಿತಿ ಇದರ ಆಶ್ರಯದಲ್ಲಿ ಮಂಡೆಕೋಲು ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕೋತ್ಸವ ಹಾಗೂ ಸಮೂಹಿಕ ಸತ್ಯದತ್ತ ವ್ರತ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮ ಮಾ.12 ರಂದು ನಡೆಯಿತು.
ಒಡಿಯೂರು ಗುರುದೇವಾನಂದ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂತಡ್ಕ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಮಂಡೆಕೋಲು ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಮುಖ್ಯಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಜಿ, ಮಂಡೆಕೋಲು ಮಹಾವಿಷ್ಣು ದೇವಸ್ಥಾನದ ಪವಿತ್ರಪಾಣಿ ಕೇಶವಮೂರ್ತಿ ಹೆಬ್ಬಾರ್, ಮಂಡೆಕೋಲು ಯಾದವ ಸಭಾ ಪ್ರಾದೇಶಿಕ ಸಮಿತಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ತಾಲೂಕು ಘಟ ಸಮಿತಿ ಅಧ್ಯಕ್ಷ ಸುಹಾಸ್ ಅಲೆಕ್ಕಾಡಿ, ಮಂಡೆಕೋಲು ಘಟ ಸಮಿತಿ ಅಧ್ಯಕ್ಷ ವಿನೋದ್ ಕುಮಾರ್ ಕಣೆಮರಡ್ಕ ಮುಖ್ಯ ಅತಿಥಿಗಳಾಗಿದ್ದರು.
ಸನ್ಮಾನ : ಸಮಾರಂಭದಲ್ಲಿ ನಾಟಿವೈದ್ಯರುಗಳಾದ ಶ್ರೀಮತಿ ರಾಮಕ್ಕ ಮಾಧವ ಗೌಡ ಬಳ್ಳಕಜೆ, ಕೃಷ್ಣಪ್ಪ ಗೌಡ ಮಂಡೆಕೋಲುಬೈಲು, ಸಾಮಾಜಿಕ ಕ್ಷೇತ್ರದಲ್ಲಿ ಸದಾನಂದ ಮಾವಜಿಯವರನ್ನು ಸನಾನಿಸಲಾಯಿತು.
ಶಿವಪ್ರಸಾದ್ ಉಗ್ರಾಣಿಮನೆ ಸ್ವಾಗತಿಸಿದರು. ಸರೋಜಿನಿ ಮಾವಂಜಿ ವರದಿ ವಾಚಿಸಿದರು. ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ ಪ್ರಾಸ್ತಾವಿಕ ಮಾತನಾಡಿದರು.
ಸುಜಾತ ಕಣೆಮರಡ್ಕ, ಸೀತಾರಾಮ ಮಂಡೆಕೋಲು, ಮೋಹಿನಿ ಮಂಡೆಕೋಲು ಸನ್ಮಾನಿತರ ಪರಿಚಯ ಮಾಡಿದರು.
ಅನಿಲ್ ಅಕ್ಕಪ್ಪಾಡಿ – ದಿವ್ಯ ಬೇಂಗತ್ತಮಲೆ ಕಾರ್ಯಕ್ರಮ ನಿರೂಪಿಸಿದರು.ಸೀತಾರಾಮ ವಂದಿಸಿದರು.