
ಗುತ್ತಿಗಾರು ಗ್ರಾಮದ ಚಿತ್ತಡ್ಕ ಜತ್ತಪ್ಪ ಮಾಸ್ಟರ್ ದಂಪತಿಗಳಿಗೆ ಅಭಿನಂದನಾ ಕಾರ್ಯಕ್ರಮವು ಇತ್ತೀಚೆಗೆ ಅವರ ಚಿಲ್ತಡ್ಕ ನಿವಾಸದಲ್ಲಿ ನಡೆಯಿತು.
ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕಾಗಿ ತೊಡಗಿಸಿಕೊಂಡು ಬಂದಿರುವ ಹಿರಿಯ ನಾಗರಿಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಂಗಳೂರಿನ ಮರೋಳಿ ಬಳಿಯ ನಿವಾಸಿ ತಾರಸಿ ಕೃಷಿಕ ಡಾ| ಕೃಷ್ಣಪ್ಪಗೌಡ ಪಡ್ಡಂಬೈಲ್ ರವರು ಕಳೆದ ಹಲವಾರು ವರ್ಷಗಳಿಂದ ಅಭಿನಂದನಾ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದಾರೆ. ಈ ನಿಟ್ಟಿನಲ್ಲಿ ಚಿತ್ತಡ್ಕ ಜತ್ತಪ್ಪ ಮಾಸ್ಟರ್ ನಿವಾಸಕ್ಕೆ ತೆರಳಿ ದಂಪತಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜತ್ತಪ್ಪ ಮಾಸ್ಟರ್, ಶ್ರೀಮತಿ.ಶಾರದಾ ಜತ್ತಪ್ಪ, ಡಾ| ಕೃಷ್ಣಪ್ಪ ಗೌಡ ಪಡ್ಡಂಬೈಲು ಮತ್ತಿತರರು ಉಪಸ್ಥಿತರಿದ್ದರು.