



ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಬಲ ಪಡೆದ ಬಳಿಕ ಪ್ರತಿಷ್ಠೆಯ ಕಣವಾಗಿದ್ದ ಲ್ಯಾಂಪ್ ಸೊಸೈಟಿಯಲ್ಲಿ ಆಪರೇಶನ್ ಕಮಲ ನಡೆದು ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಅಧ್ಯಕ್ಷರಾಗಿ ನೀಲಮ್ಮಕೆ. ಕಣಿಪ್ಪಿಲ, ಉಪಾಧ್ಯಕ್ಷರಾಗಿ ಪುಂಡರಿಕ ಕೆ. ಕಾಪುಮಲೆ ಅಲೆಟ್ಟಿ ಇವರು ಆಯ್ಕೆಯಾಗಿದ್ದಾರೆ.
ಅಧ್ಯಕ್ಷತೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ನೀಲಮ್ಮ ಹಾಗೂ ಕಾಂಗ್ರೆಸ್ ನಿಂದ ಮಾಧವ ದೇವರಗದ್ದೆ, ಉಪಾಧ್ಯಕ್ಷತೆಗೆ ಬಿಜೆಪಿಯಿಂದ ಪುಂಡರಿಕ ಹಾಗೂ ಕಾಂಗ್ರೆಸ್ ನಿಂದ ಭವಾನಿ ಶಂಕರ ಕಲ್ಮಡ್ಕ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಬಿಜೆಪಿಯ ನೀಲಮ್ಮ ರವರು 7 ಮತ ಪಡೆದು ಅಧ್ಯಕ್ಷರಾದರೇ , ಬಿಜೆಪಿಯ ಪುಂಡರೀಕ 7 ಮತ ಪಡೆದು ಉಪಾಧ್ಯಕ್ಷರಾದರು.
ಕಾಂಗ್ರೆಸ್ ಸದಸ್ಯರಾಗಿ ಆಯ್ಕೆಯಾದ ನೀಲಮ್ಮ ಹಾಗೂ ಜಶ್ಮಿತಾ ಆಪರೇಶನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರ್ಪಡೆಗೊಂಡಿದ್ದರು.
ಈ ಚುನಾವಣೆಯಲ್ಲಿ 9 ಜನ ನಿರ್ದೇಶಕರನ್ನು ಹೊರತುಪಡಿಸಿ ನಾಮನಿರ್ದೇಶಿತ ಸದಸ್ಯರಿಗೆ, ಸಹಕಾರಿ ಸಂಘಗಳ ಸಹಾಯಕ ನಿಬಂಧಕರಿಗೆ ಲ್ಯಾಂಪ್ಸ್ ಮಹಾಮಂಡಲದ ಪ್ರತಿನಿಧಿಗೆ ಹಾಗೂ ಸುಳ್ಯ ವಲಯ ಅರಣ್ಯಾಧಿಕಾರಿಯವರಿಗೆ ಮತದಾನದ ಅವಕಾಶವಿತ್ತು.
ಚುನಾವಣೆ ನಡೆದು ಮತೆ ಎಣಿಕೆ ನಡೆದಾಗ ಬಿಜೆಪಿ ಅಭ್ಯರ್ಥಿಗಳಿಗೆ ತಲಾ,7 ಮತಗಳು ಬಂದು ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಕಾಂಗ್ರೆಸ್ ಅಭ್ಯರ್ಥಿಗಳಿಗೆ 6 ಮತಗಳು ಬಂದು ಪರಾಭವಗೊಂಡರು. ಬಿಜೆಪಿ ಅಭ್ಯರ್ಥಿಗಳು ತಮ್ಮ ನಿರ್ದೇಶಕರಲ್ಲದೆ ಲ್ಯಾಂಪ್ಸ್ ಮಹಾಮಂಡಲದ ಪ್ರತಿನಿಧಿಯ ಮತ ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ನಿರ್ದೇಶಕರ ಮತಗಳಲ್ಲದೆ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ, ವಲಯಾರಣ್ಯಾಧಿಕಾರಿಗಳ ಮತ್ತು ನಾಮನಿರ್ದೇಶಿತ ಸದಸ್ಯರ ಮತ ಕಾಂಗ್ರೆಸ್ ಗೆ ದೊರೆತಿದೆ.