Ad Widget

ಕನಕಮಜಲು : ಅಂಗಡಿ ಅಂಗಡಿಯಿಂದ ಕಳ್ಳತನಕ್ಕೆ ಯತ್ನ – ಇಬ್ಬರು ಕಳ್ಳರನ್ನು ಸೆರೆ ಹಿಡಿದ ಊರವರು

. . . . . . . . .

ಕನಕಮಜಲಿನಲ್ಲಿ ಅಂಗಡಿ ಕಳವು ನಡೆಸುತ್ತಿದ್ದಾಗಲೇ ಇಬ್ಬರು ಕಳ್ಳರನ್ನು ಊರವರು ಹಿಡಿದು, ವಿಚಾರಿಸಿ ಇದೀಗ ಪೋಲೀಸರಿಗೊಪ್ಪಿಸಿರುವ ಘಟನೆ ವರದಿಯಾಗಿದೆ.

. . . . . . .

ಕನಕಮಜಲು ಗ್ರಾಮದ ನರಿಯೂರು ಸೀತಾರಾಮ ಗೌಡರ ಕಟ್ಟಡದಲ್ಲಿರುವ ಧನಂಜಯ ಎಂಬವರ ಮಾಲಕತ್ವದ ಶ್ರೀ ಗಣೇಶ್ ಸ್ಟೋರ್ ನ ಒಳಗೆ ರಾತ್ರಿ ಸುಮಾರು 3.30 ಕ್ಕೆ ಜೋರು ಶಬ್ದ ಕೇಳುತ್ತಿತ್ತೆಂದೂ, ಇದು ಸೀತಾರಾಮ ಗೌಡರ ಮಗನಿಗೆ ಕೇಳಿ ಅವರು ಅಂಗಡಿ ಬಳಿ ಬಂದು ನೋಡಿದಾಗ, ಎದುರೊಂದು ರಿಟ್ಸ್ ಕಾರು ಇತ್ತೆಂದೂ, ಅಂಗಡಿ ಶೆಟರ್‌ ಒಡೆದಿತ್ತೆನ್ನಲಾಗಿದೆ. ತಕ್ಷಣ ಅವರು ಮನೆಯವರಿಗೆ ಹಾಗೂ ಕನಕಮಜಲಿನ ಸ್ಥಳೀಯರಿಗೆ ಈ ವಿಷಯ ತಿಳಿಸಿದರು.

ಅಂಗಡಿಯೆದುರು ಜನ ಸೇರಿ ಅಂಗಡಿಯ ಎದುರು ನಿಂತಿದ್ದ ಹಾಗೂ ಅಂಗಡಿಯೊಳಗೆ ಕಳವು ನಡೆಸುತ್ತಿದ್ದ ಕಳ್ಳನನ್ನು ಹಿಡಿದುಕೊಂಡರು. ವಿಚಾರಿಸಿದಾಗ ಬಂಟ್ವಾಳದ ಸಜೀಪ ಮೂಲದ ಸುಹೈಲ್ ಹಾಗು ರಿಯಾಜ್ ಎಂದು ಪರಿಚಯ ಹೇಳಿದರೆನ್ನಲಾಗಿದೆ. ಅಲ್ಲದೆ ಬಾಡಿಗೆ ಕಾರಿನಲ್ಲಿ ಅವರು ಬಂದಿದ್ದರೆಂದು ತಿಳಿದುಬಂದಿದೆ.

ಕನಕಮಜಲು ಪರಿಸರದಲ್ಲಿ ಇತ್ತೀಚಿನ ಕೆಲ ವರ್ಷದಿಂದ ಕೆಲವು ಕಳವು ಪ್ರಕರಣ ನಡೆದಿತ್ತು. ಅದೆಲ್ಲವೂ ಇದುವರೆಗೆ ಪತ್ತೆಯಾಗಿರಲಿಲ್ಲ. ಇದೀಗ ರೆಡ್ ಹ್ಯಾಂಡಾಗಿ ಊರವರೇ ಸೇರಿ ಕಳ್ಳನನ್ನು ಹಿಡಿದಿದ್ದಾರೆ.

ಕನಕಮಜಲಿನಲ್ಲಿ ಅಂಗಡಿ ಕಳ್ಳತನಕ್ಕೂ ಮೊದಲು ಇವರಿಬ್ಬರೂ ಕಾವಿನಲ್ಲಿಯೂ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿ ಬಂದಿದ್ದರು ಎನ್ನಲಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading