
ಗುತ್ತಿಗಾರಿನ ರಾಘವೇಂದ್ರ ಕಾಂಪ್ಲೆಕ್ಸ್ ನಲ್ಲಿ ಶಿವರಾಮ ದೇವ ಮಾಲೀಕತ್ವದ ಪ್ರಕೃತಿ ಸ್ಟೇಷನರಿ ಮಾ.7 ರಂದು ಶುಭಾರಂಭಗೊಂಡಿತು.
ಹಿರಿಯರಾದ ಮುಳಿಯ ತಿಮ್ಮಪ್ಪಯ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ನಿಕಟಪೂರ್ವ ಅಧ್ಯಕ್ಷ ವೆಂಕಟ್ ದಂಬೆಕೋಡಿ, ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೇಶವ ಹೊಸೋಳಿಕೆ, ರಾಘವೇಂದ್ರ ಕಾಂಪ್ಲೆಕ್ಸ್ ನ ಮಾಲಕ ಅನಿಲ್ ಕುಮಾರ್ ಅತಿಥಿಗಳಾಗಿದ್ದರು.
ವಕೀಲರಾದ ಹರೀಶ್ ಪೂಜಾರಿಕೋಡಿ, ಡಿ.ಆರ್ ಲೊಕೇಶ್ವರ, ಸೋಮಶೇಖರ ಮಾವಜಿ, ಚೋಮಣ್ಣ ಉತ್ರಂಬೆ, ರಬ್ಬರ್ ಸೊಸೆಯು ಕಾರ್ಯನಿರ್ವಹಣಾ ಅಧಿಕಾರಿ ಶ್ರೀಮತಿ ಲಕ್ಷ್ಮೀ, ಮುರಳಿ ಮೊಟ್ಟೆ ಮನೆ, ಜಯರಾಮ ಕಾನೋವು, ಜಗದೀಶ ಪೈಕ್ಕ, ಸೋಹನ್ ಲಾಲ್, ನವೀನ್ ವೈ. ಕೆ, ಹೇಮಾವತಿ ಪಡ್ಡು, ಬಿ.ಕೆ ಶ್ರೀನಿವಾಸ, ಶ್ರೀಮತಿ ಸಂಧ್ಯಾ ರಾಮಣ್ಣ, ಚೈತ್ರ ಸೋಮವಾರಪೇಟೆ, ಮನಸ್ವಿ ಸೋಮವಾರಪೇಟೆ, ಸಾಧನ ಸೋಮವಾರಪೇಟೆ, ಸುಬ್ರಹ್ಮಣ್ಯ, ಶ್ರೀಮತಿ ಯಶೋಧ ಶಿವರಾಮದೇವ, ಪ್ರತೀಕ್ ದೇವ ಪ್ರಣಾಮ್ ದೇವ, ನಮಿತಾ ಮತ್ತಿತರರು ಉಪಸ್ಥಿತರಿದ್ದರು.
ಈ ಅಂಗಡಿಯಲ್ಲಿ ಫ್ಯಾನ್ಸಿ, ಸ್ಪೋಟ್ಸ್ ಮತ್ತು ಟಾಯಿಸ್, ಮತ್ತಿತರರ ಐಟಂಗಳು ಹೋಲ್ ಸೇಲ್ ಮತ್ತು ರಿಟೇಲ್ ಆಗಿ ಲಭ್ಯವಿದ್ದು ಇಲ್ಲಿ ಎಲ್ಲಾ ತರಹದ ಶಾಲಾ ಕಾಲೇಜು ಮಕ್ಕಳ ಪುಸ್ತಕ, ಲೇಖನ ಇತರ ಸಾಮಾಗ್ರಿಗಳು, ಲೇಡೀಸ್ ಮೇಕಪ್ ಮತ್ತು ಕಾಪ್ಟಮ್ ಗಳು, ಫ್ಯಾನ್ಸಿ ಐಟಂಗಳು, ಮಕ್ಕಳ ಆಟಿಕೆಗಳು, ಗಿಫ್ಟ್ ಐಟಂಗಳು, ಸ್ಪೋರ್ಟ್ಸ್ ಐಟಂಗಳು, ಹೋಲ್ ಸೇಲ್ ದರದಲ್ಲಿ ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.