

ಇತಿಹಾಸ ಪ್ರಸಿದ್ಧ ಶ್ರೀ ರಾಜ್ಯದೈವ ಮತ್ತು ಪುರುಷದೈವ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಅಂಗವಾಗಿ ಪೂರ್ವ ಪದ್ದತಿಯ ಪ್ರಕಾರವಾಗಿ ಧ್ವಜಾರೋಹಣ ನೇರವೇರಿತು. ಮಾರ್ಚ್ 14 ರಂದು ಮುಂಡೋಡಿ ತರವಾಡು ಮನೆಯಿಂದ, ಶ್ರೀ ರುದ್ರ ಚಾಮುಂಡಿ ದೈವಸ್ಥಾನದಿಂದ,ತಳೂರಿನಿಂದ ಶ್ರೀ ದೈವಗಳ ಭಂಡಾರ ಬಂದು ರಾತ್ರಿ ಪಲ್ಲಕ್ಕಿ ಉತ್ಸವ ಹಾಗೂ 15 ರಂದು ಬೆಳಿಗ್ಗೆ ಶ್ರೀ ರಾಜ್ಯದೈವ, ಶ್ರೀ ರುದ್ರ ಚಾಮುಂಡಿ, ಪುರುಷ ದೈವ, ಪಂಜುರ್ಲಿ ದೈವಗಳ ನೇಮೋತ್ಸವ ಗಳು ನಡೆಯಲಿದೆ.