
ಯಾವತ್ತೋ ಒಂದು ದಿನ ಮರೆಯಾಗುವ ಮನುಷ್ಯನ ಬದುಕಿಗೆ ಮರುಹುಟ್ಟು ಎಂಬುವುದೇ ಇಲ್ಲವೇ…!?
ಒಂದಲ್ಲ ಒಂದು ದಿನ ಕೊನೆಯಾಗುವ ಅವರ ಕನಸಿಗೆ ಕಂಬನಿಯೇ ಕೊನೆಯ ಉತ್ತರವೇ…!?
ಅವರು ನಮ್ಮಿಂದ ದೂರವಾದ ನಂತರ ನಾವು ನಮ್ಮ ದುರಾದೃಷ್ಟವನ್ನು ದೂರುವುದೇ…!?
ಅವರು ನಮ್ಮ ಜೊತೆಗಿದ್ದಾಗಲೇ ನಾವು ಅವರೊಂದಿಗೆ ಸಂತೋಷದಿಂದ ಸಮಯವನ್ನು ಕಳೆಯಬಹುದಿತ್ತಲ್ಲವೇ, ಬೆಟ್ಟದಷ್ಟು ಪ್ರೀತಿಯನ್ನು ಅವರಿಗೆ ನೀಡಬಹುದಿತ್ತಲ್ಲವೇ…!?
ಜೊತೆಗಿದ್ದಾಗಲೇ ನಮ್ಮವರಿಗೆ ಒಂದಿಷ್ಟು ಪ್ರೀತಿಯನ್ನು ನೀಡಲಾಗದ ನಾವುಗಳು, ಕಣ್ಣೆದುರಿಗಿದ್ದಾಗಲೇ ನಮ್ಮವರಿಗೆ ಒಂದಿಷ್ಟು ಸಮಯವನ್ನು ಮೀಸಲಿರಿಸಲಾಗದ ನಾವುಗಳು ಅವರು ನಮ್ಮಿಂದ ದೂರವಾದ ನಂತರ ಅವರ ನೆನಪಿನೊಂದಿಗೆ ಪಶ್ಚಾತ್ತಾಪದ ಬೆಂಕಿಯಲ್ಲಿ ಬೇಯುತ್ತಲೇ ಬದುಕುತ್ತೇವೆ…
ಇಂದು ನಮ್ಮಿಂದ ನಮ್ಮವರು ದೂರವಾಗುತ್ತಾರೆ, ನಾಳೆ ನಮ್ಮವರಿಂದ ನಾವು ದೂರವಾಗುತ್ತೇವೆ. ಅದಕ್ಕಾಗಿಯೇ ಹಿರಿಯರು, ಜ್ಞಾನಿಗಳು ಹೇಳಿದ್ದು “ಬದುಕಿದ್ದಾಗಲೇ ನಿಮ್ಮವರನ್ನು ಪ್ರೀತಿಸಿ, ಜೊತೆಗಿದ್ದಾಗಲೇ ನಿಮ್ಮವರಿಗೆ ಸಮಯವನ್ನು ಕೊಡಿ, ಏಕೆಂದರೆ ಅವರು ನಿಮ್ಮಿಂದ ದೂರವಾದ ನಂತರ ನಿಮ್ಮ ಬಳಿ ಉಳಿಯುವುದು ನೀವು ಅವರೊಂದಿಗೆ ಕಳೆದಂತಹ ದಿನಗಳ ನೆನಪುಗಳು ಮಾತ್ರ” ಎಂದು…
✍️ಉಲ್ಲಾಸ್ ಕಜ್ಜೋಡಿ