Ad Widget

ಹರಿಹರ ಸೊಸೈಟಿ ಚುನಾವಣೆ ಫಲಿತಾಂಶ ಹೈಕೋರ್ಟ್ ತಡೆಯಾಜ್ಞೆಯಿಂದ ವಿಳಂಬವಾಗಿದೆ – ಮಾಜಿ ಅಧ್ಯಕ್ಷ ಹರ್ಷಕುಮಾರ ದೇವಜನ


ಕೊಲ್ಲಮೊಗರು ಹರಿಹರ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಜ. 19ರಂದು ನಡೆದಿದ್ದು, ಈ ಚುನಾವಣೆಯಲ್ಲಿ ಸಹಕಾರಿ ಅಭಿವೃದ್ಧಿ ಬಳಗ, ಸಹಕಾರ ಭಾರತಿ, ಹಾಗೂ ಸ್ವಾಭಿಮಾನ ಬಳಗದ ಮೂರು ತಂಡಗಳು ಸ್ಪರ್ಧಿಸಿರುತ್ತವೆ. ಈ ಪೈಕಿ ಆಡಳಿತ ಮಂಡಳಿ ರಚನೆಗೆ ವಿಳಂಬವಾಗಿರುವುದು ಉಚ್ಚ ನ್ಯಾಯಾಲಯದಿಂದ ತಂದಿರುವ ತಡೆಯಾಜ್ಜೆಯಲ್ಲಿ ಮತದಾನದ ಹಕ್ಕಿನಲ್ಲಿ ಸುಸ್ತಿದಾರರು ಹಾಗೂ ಮೃತಪಟ್ಟವರ ಹೆಸರಿರುವುದಿಂದ ಆಗಿರುತ್ತದೆ ಎಂದು ಸೊಸೈಟಿಯ ಮಾಜಿ ಅಧ್ಯಕ್ಷ ಹರ್ಷ ಕುಮಾರ ದೇವಜನ ಹೇಳಿದರು.

. . . . . . . . .

. . . . . . .

ಅವರು ಸುಬ್ರಹ್ಮಣ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು. ಈಗಾಗಲೇ ಸಹಕಾರ ಭಾರತಿ ಅಭ್ಯರ್ಥಿಗಳು ನಮ್ಮ ಮೇಲೆ ಆರೋಪ ಮಾಡಿರುವುದು ಪೂರ್ತಿ ಸುಳ್ಳಾಗಿರುತ್ತದೆ. ಪ್ರಸ್ತುತ ಸೊಸೈಟಿಗೆ ಆಡಳಿತಾಧಿಕಾರಿ ನೇಮಕವಾಗಿದ್ದು ಸಂಘದ ಸದಸ್ಯರಿಗೆ ಬೇಕಾದವರಿಗೆ ಸಾಲದ ಸೌಲಭ್ಯ ,ಬೆಳೆಸಾದ ರಿನಿವಲ್, ಹೊಸದಾಗಿ ಬೆಳೆ ಸಾಲ, ದೀರ್ಘಾವಧಿ ಸಾಲ, ನವೋದಯ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ, ಮತ್ತು ಕೃಷಿಯೇತರ ಉದ್ದೇಶಕ್ಕಾಗಿ ಸಾಲಬೇಕಾದವರಿಗೆ ಸಾಲ ಮಂಜೂರು ಆಗುತ್ತಿದೆ.

ಚುನಾವಣೆಯ ಫಲಿತಾಂಶ ವಿಳಂಬವಾಗಿರುವುದಕ್ಕೆ ನಾವು ಭಾದ್ಯಸ್ಥರಲ್ಲ, ಸುಸ್ತಿದಾರರು ಮತ ಚಲಾಯಿಸಿರುವುದು ಕಾರಣವಾಗಿದೆ ಎಂದು ಸೊಸೈಟಿ ಮಾಜಿ ಅಧ್ಯಕ್ಷ ಹರ್ಷಕುಮಾರ್ ದೇವಜನ ತಿಳಿಸಿರುತ್ತಾರೆ.
ಪತ್ರಿಕಾಗೋಷ್ಠಿಯಲ್ಲಿ ಸಹಕಾರಿ ಅಭಿವೃದ್ಧಿ ಸಂಘದ ಅಭ್ಯರ್ಥಿ ಗಳಾದ ವಿಜಯ ಕೂಜುಗೋಡು, ಶೇಖರ ಅಂಬೆಕಲ್ಲು, ಮಣಿಕಂಠ ಕೊಳಗೆ, ಮೋನಪ್ಪ .ಕೆ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading