
ಐವರ್ನಾಡಿನಲ್ಲಿ ತಮಿಳು,ತೆಲುಗು ಚಲನಚಿತ್ರಕ್ಕಾಗಿ ಚಿತ್ರೀಕರಣ ನಡೆಯುತ್ತಿದೆ.
ಕೆಲದಿನಗಳಿಂದ ಗ್ರಾಮದ ಬೇರೆ,ಬೇರೆ ಕಡೆಗಳಲ್ಲಿ ಚಿತ್ರೀಕರಣ ನಡೆಯುತ್ತಿದ್ದು ಹಲವು ಜನರು ಭಾಗವಹಿಸುತ್ತಿದ್ದಾರೆ.
ಇಂದು ಮುಖ್ಯ ರಸ್ತೆ ನೆಕ್ರೆಪ್ಪಾಡಿ ಕಾಂಪ್ಲೆಕ್ಸ್ ಎದುರು ಚಿತ್ರೀಕರಣ ನಡೆಯುತ್ತಿದೆ.

ತಮಿಳುನಾಡಿನ ಸುಮಾರು 80 ಜನರು ಈ ಚಿತ್ರೀಕರಣ ತಂಡದಲ್ಲಿದ್ದು ಐವರ್ನಾಡಿನ ಯುವಕರು ಕೂಡ ಇವರೊಂದಿಗೆ ಭಾಗವಹಿಸುತ್ತಿದ್ದಾರೆ.
ಚಿತ್ರೀಕರಣ ತಂಡದವರು ಸುಳ್ಯದ ಕಮಾಂಡರ್ ಜೀಪುಗಳನ್ನು ಹಾಗೂ ಇತರ ವಾಹನಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದು ಹಲವು ಕಡೆಗಳಲ್ಲಿ ಶೂಟಿಂಗ್ ನಡೆಯುತ್ತಿದೆ.
ನೆಕ್ರೆಪ್ಪಾಡಿ ಕಾಂಪ್ಲೆಕ್ಸ್ ನಲ್ಲಿ ಶ್ರೀ ಎಂಬ ಟೀ ಸ್ಟಾಲನ್ನು ಮಾಡಿಕೊಂಡಿದ್ದು ಅಲ್ಲಿಯೇ ಟೀ ವ್ಯವಸ್ಥೆ ಮಾಡಿಕೊಂಡಿದ್ದಾರೆ.ಐವರ್ನಾಡಿನ ಹೋಟೆಲೊಂದರಲ್ಲಿ ಊಟದ ವ್ಯವಸ್ಥೆ ಮಾಡಿಕೊಂಡಿದ್ದು ಸುತ್ತ ಮುತ್ತ ಶೂಟಿಂಗ್ ನಡೆಯುತ್ತಿದೆ.
ಈ ಸಿನಿಮಾ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗಲಿದೆ.