
ಮಾ.08 ಹಾಗೂ 09 ರಂದು ಸುಳ್ಯದ ಪೈಚಾರ್ ಬಳಿ ಇರುವ ಶಾಂತಿನಗರದಲ್ಲಿ ಶ್ರೀ ಮುತ್ತಪ್ಪ ತಿರುವಪ್ಪ ದೈವಾರಾದನಾ ಸೇವಾ ಸಮಿತಿ(ರಿ), ಶ್ರೀ ಮುತ್ತಪ್ಪ ತಿರುವಪ್ಪ ಉತ್ಸವ ಸಮಿತಿ ಹಾಗೂ ಮಹಿಳಾ ಸಮಿತಿ ಇವರ ಜಂಟಿ ಆಶ್ರಯದಲ್ಲಿ ದೈವಗಳ ನೇಮೋತ್ಸವವು ಮಾರ್ಚ್ 08 ಹಾಗೂ 09 ರಂದು ನಡೆಯಲಿದೆ. ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ದೈವ ಕೃಪೆಗೆ ಪಾತ್ರರಾಗಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ಕಾರ್ಯಕ್ರಮಕ್ಕೆ ದಾನಿಗಳಾದ ಸೆಲ್ಕೋ ಸೋಲಾರ್ ಸಂಸ್ಥೆಯ ವ್ಯವಸ್ಥಾಪಕ , ನಿರ್ದೇಶಕರಾದ ಶ್ರೀಯುತ ಆಶಿಕ್ ರವರು ಸುಮಾರು 22 ಸಾವಿರ ರೂಪಾಯಿ ಮೌಲ್ಯದ ಸೋಲಾರ್ ಲೈಟನ್ನು ದೈವಸ್ಥಾನಕ್ಕೆ ಕೊಡುಗೆಯಾಗಿ ನೀಡಿ ಅಳವಡಿಸಿಕೊಟ್ಟಿರುತ್ತಾರೆ.