
ಗೋಸೇವಾ ಗತಿವಿಧಿ ಕರ್ನಾಟಕ, ರಾಧಸುರಭಿ ಗೋಮಂದಿರ ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ (ರಿ.) ನೇತೃತ್ವದಲ್ಲಿ ನಂದಿ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದೆ.
ನಂದಿ ರಥ ಯಾತ್ರೆಯು ಮಾ.15 ರಂದು ಶನಿವಾರ ಸುಳ್ಯಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲು ತಿರ್ಮಾನಿಸಲಾಗಿದ್ದು, ಈ ಬಗ್ಗೆ ಫೂರ್ವಭಾವಿ ಸಭೆಯು ಮಾ. 05 ರಂದು ಕೇರ್ಪಳದ ದುರ್ಗಾಪರಮೇಶ್ವರಿ ಸಭಾ ಭವನದಲ್ಲಿ ಸಂಜೆ ಗಂಟೆ 5.15 ನಡೆಯಲಿದೆ. ಗೋ ಸಂತತಿಯ ರಕ್ಷಣೆ, ಉತ್ಪನ್ನಗಳ ಪ್ರಚಾರ, ಮಣ್ಣು ಉಳಿಸುವ ನಂದಿ ಕೃಷಿ ಜಾಗೃತಿ ಹಿನ್ನೆಲೆಯಲ್ಲಿ ಈ ಪೂರ್ವಾಭಾವಿ ಸಭೆಗೆ ತಾಲೂಕಿನ ಕೃಷಿಕರು, ಹೈನುಗಾರರು, ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರು ಹಾಗೂ ಗೋಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಘಟಕರು ತಿಳಿಸಿದ್ದಾರೆ.