ಸಿರಿಬಾಗಿಲು ಶಾಲಾ ಮುಖ್ಯ ಶಿಕ್ಷಕ ವಿಜಯಕುಮಾರ ನಡುತೋಟ ಅವರ ಸನ್ಮಾನ ಸಮಾರಂಭ ಹಾಗೂ ಸತ್ಕಾರ ಕೂಟ.

. . . . . . . . .

ಸುಬ್ರಹ್ಮಣ್ಯ ಮಾ.2: ಸುಬ್ರಹ್ಮಣ್ಯ ಸಮೀಪದ ಸಿರಿಬಾಗಿಲು ದ ಕ ಜಿ ಪ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ವಿಜಯಕುಮಾರ ನಡುತೋಟ ಅವರಿಗೆ ಇಂದು ಆದಿತ್ಯವಾರ ಸನ್ಮಾನ ಸಮಾರಂಭ ಹಾಗೂ ಸತ್ಕಾರ ಕೂಟ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಂಜುನಾಥ್ ವಹಿಸಿದ್ದರು. ಕಾರ್ಯಕ್ರಮವನ್ನು ಕೊಂಬಾರು ಗ್ರಾಮ ಪಂಚಾಯತ್ ಅಧ್ಯಕ್ಷ ಮಧುಸೂಧನ ಓಡೋಳಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಕಡಬ ತಾಲೂಕ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಸುಬ್ರಹ್ಮಣ್ಯ ದ ನಿವೃತ್ತ ಪ್ರಾಂಶುಪಾಲ ನೀಲಪ್ಪ ಗೌಡ ನಡುತೋಟ, ಕೊಂಬಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಪ್ರಸನ್ನಕುಮಾರ ಕುಮಾರ ಪುರ ಹಾಗೂ ಜಯಶ್ರೀ ರಾಮಚಂದ್ರ ದೇರಾಣೆ ಉಪಸ್ಥಿತರಿದ್ದು, ನಿವೃತ್ತರ ಬಗ್ಗೆ ಗುಣಗಾನ ಮಾಡಿದರು.
ನಿವೃತ್ತರ ಪರವಾಗಿ ಬೆಳ್ಳಾರೆ ಪಬ್ಲಿಕ್ ಸ್ಕೂಲ್ ಮುಖ್ಯ ಶಿಕ್ಷಕ ಮೈಲಪ್ಪ, ಸುಬ್ರಹ್ಮಣ್ಯದ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ, ಅಂಗನವಾಡಿ ಶಿಕ್ಷಕಿ ವನಜಾಕ್ಷಿ, ಸಿರಿಬಾಗಿಲು ಶಾಲಾ ಪೂರ್ವ ಶಿಕ್ಷಕ ದಿನೇಶ್ ,ಶಿಕ್ಷಕಿ ಲಿಖಿತ, ಮುಂತಾದವರು ಅನಿಸಿಕೆ ವ್ಯಕ್ತಪಡಿಸಿದರು.
ಸಿರಿಬಾಗಿಲು ಶಾಲಾ ಪೋಷಕರು, ಅಂಗನವಾಡಿಯವರು, ಶಿಕ್ಷಕ ವೃಂದದವರು ,ವಿದ್ಯಾರ್ಥಿ ವೃಂದದವರು, ಹಿರಿಯ ವಿದ್ಯಾರ್ಥಿಗಳು, ನಿವೃತ್ತ ಗುರುಗಳನ್ನ ಸನ್ಮಾನಿಸಿದರು.
ಹಾಗೆಯೇ ವಿಜಯಕುಮಾರ್ ಅವರ ಅಭಿಮಾನಿಗಳು, ಶಿಕ್ಷಕ ಬಂಧುಗಳು, ವಿವಿಧ ಸಂಘ ಸಂಸ್ಥೆಯವರು, ಕುಟುಂಬದವರು, ಬಂಧು ಮಿತ್ರರು ಸನ್ಮಾನಿಸಿದರು.
ಪ್ರಭಾರ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ಅಪೂರ್ವ ನಿರೂಪಣೆ ಮಾಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕಿ ವೀಣಾ ಧನ್ಯವಾದ ಸಮರ್ಪಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading